ವಿಪ್ರ ಸಮುದಾಯದಿಂದ ಪ್ರತಿಭಟನೆ

Oplus_131072
Oplus_131072
Published on

ನಂಜನಗೂಡು: ಕಳೆದ ವಾರ ಶಿವಮೊಗ್ಗ ಹಾಗೂ ಬೀದರ್‌ನಲ್ಲಿ ಸಿಇಟಿ ಪರೀಕ್ಷೆ ಬರೆಯಲು ತೆರಳಿದ ವಿಪ್ರ ವಿದ್ಯಾರ್ಥಿಗೆ ಜನಿವಾರ ತೆಗೆದು ನಂತರ ಪರೀಕ್ಷೆ ಬರೆಯುವಂತೆ ಒತ್ತಾಯ ಮಾಡಿದ್ದು, ವಿಪ್ರ ಸಮುದಾಯದ ವಿದ್ಯಾರ್ಥಿಗೆ ಅನ್ಯಾಯವಾಗಿರುವುದನ್ನು ಖಂಡಿಸಿ ನಂಜನಗೂಡು ಬ್ರಾಹ್ಮಣ ಧರ್ಮ ಸಹಾಯಕ ಸಭಾ ವತಿಯಿಂದ ಶನಿವಾರ ಸಂಜೆ ಕಪಿಲಾನದಿ ತೀರದಲ್ಲಿ ಗಾಯತ್ರಿ ಮಂತ್ರ ಜಪಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ಬ್ರಾಹ್ಮಣ ಧರ್ಮ ಎಲ್ಲರ ಹಿತಕಾಯುವ ಸಮುದಾಯವಾಗಿದೆ. ಆದರೆ ಯಾರಿಗೂ ಕೆಡಕು ಮಾಡುವ ಸಮುದಾಯವಲ್ಲ. ಆದರೂ ಸಮಾಜದಲ್ಲಿ ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದ್ದಾರೆ. ಇಂತಹ ಅವಮಾವೀಯ ಕೃತ್ಯ ಯಾರಿಗೂ ಆಗಬಾರದು. ಎಲ್ಲ ಸಮುದಾಯಗಳನ್ನು ಗೌರವಿಸಬೇಕು. ಧರ್ಮಕ್ಕೆ ಅಪಮಾನ ಮಾಡಿರುವ ಇಂತಹ ಅಧಿಕಾರಿಗಳನ್ನು ವಿರೋಧಿಸುತ್ತೇವೆ. ಆ ವಿದ್ಯಾರ್ಥಿ ಜನಿವಾರ ತೆಗೆಯದೆ ಪರೀಕ್ಷೆಯನ್ನು ಬರೆಯದೆ ವಾಪಸ್ ಮನೆಗೆ ಬಂದಿದ್ದಾನೆ. ವಿದ್ಯಾರ್ಥಿ ನಮ್ಮ ಧರ್ಮವನ್ನು ಎತ್ತಿ ಹಿಡಿದಿದ್ದಾನೆ. ಪರೀಕ್ಷೆ ಬರೆಯದೆ ಇರುವ ಕಾರಣ ಬಹಳ ಅನ್ಯಾಯವಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಪಟ್ಟಣದ ಚಿಂತಾಮಣಿ ಗಣಪತಿ ದೇವಸ್ಥಾನದಿಂದ ಆರ್.ಪಿ.ರಸ್ತೆ ಮೂಲಕ ಬ್ರಾಹ್ಮಣ ಧರ್ಮ ಮಹಾಸಭಾದವರೆಗೆ ಪ್ರತಿಭಟನಾಕಾರರು ಪಂಜಿನ ಮೆರಣಿಗೆ ನಡೆಸಿ ಘೋಷಣೆ ಕೂಗಿದರು. ನಂತರ ತಹಸೀಲ್ದಾರ್ ಕಚೇರಿಯ ಆರ್.ಐ.ಮಹೇಶ್ ಅವರಿಗೆ ಮನವಿ ಪತ್ರ ನೀಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಯು.ಎನ್. ಪದ್ಮನಾಭರಾವ್, ಬ್ರಾಹ್ಮಣ ಧರ್ಮ ಸಹಾಯಕ ಸಭಾದ ಅಧ್ಯಕ್ಷ ಆರ್.ಗೋವರ್ಧನ್, ಕಾರ್ಯದರ್ಶಿ ತಮೇಶ್, ಸದಾಶಿವು, ನಗರಸಭಾ ಸದಸ್ಯ ಕಪಿಲೇಶ್, ರಂಗನಾಥನ್, ಕಿಟ್ಟಿ,ರಾಮಮೋಹನ್, ಸತೀಶ್.ದಳವಾಯಿ, ರಮೇಶ್ ಸುಧಾಮಣಿ, ಫಣೀಂದ್ರ, ಕರಾಟೆಮುರಳಿ, ನೀಲಕಂಠ ದೀಕ್ಷತ್, ಬಾಲಕುಮಾರ್, ಲತಾ, ಸವಿತಾ, ಅನುಪಮಾ, ಉಮೇಶ್, ಪ್ರಭಾಕರ್, ಶೋಭಾ, ನಾಗಶಯನ ಹಾಗೂ ಬ್ರಾಹ್ಮಣ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net