ವಿಪತ್ತು ನಿರ್ವಹಣೆಗೆ ಸಿದ್ಧತೆ ಮುಖ್ಯ

15KMT1
Published on

ರಾಷ್ಟಿ್ರಯ ವಿಪತ್ತು ನಿರ್ವಹಣೆ ಕಾರ್ಯಕ್ರಮದಡಿ ಇಲ್ಲಿನ ಧ.ಗ್ರಾ. ಯೋಜನೆ ಕಾರ್ಯಾಲಯದಲ್ಲಿ ರಾಷ್ಟಿ್ರಯ ವಿಪತ್ತು ನಿರ್ವಹಣೆ ಸಂಯೋಜಕರ ಒಂದು ದಿನದ ತರಬೇತಿ ಕಾರ್ಯಾಗಾರ ಜರುಗಿತು.

ಜನಜಾಗೃತಿ ನಿರ್ದೇಶನಾಲಯದ ಪ್ರಾದೇಶಿಕ ನಿರ್ದೇಶಕ ವಿವೇಕ ವಿನ್ಸೆಂಟ್ ಪಯಸ್ ಉದ್ಘಾಟಿಸಿ, ವಿಪತ್ತಿಗೆ ಮುನ್ನೆಚ್ಚರಿಕೆಯಾಗಿ ಸಿದ್ಧತೆ ಹಾಗೂ ಜಾಗೃತಿ ಬಹಳ ಮುಖ್ಯ. ಸಮಾಜದ ಸಂಕಟದ ಕಾಲದಲ್ಲಿ ಮಾನವೀಯತೆ ತೋರುವುದೇ ವಿಪತ್ತು ನಿರ್ವಹಣೆ ಕಾರ್ಯಕ್ರಮವಾಗಿದೆ. ವಿಪತ್ತು ನಿರ್ವಹಣೆಯ ಮಾಹಿತಿಯನ್ನು ಸ್ವಯಂ ಸ್ಪೂರ್ತಿಯಿಂದ ಪಡೆದುಕೊಂಡು ಸಮಾಜದ ರಕ್ಷಣಾ ಕಾರ್ಯಕ್ಕೆ ಸದಾ ಸನ್ನದ್ಧರಾಗಿರಬೇಕು. ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಜತೆಗೆ ಇತರರನ್ನೂ ರಕ್ಷಿಸಬೇಕು ಎಂದರು.

ಯೋಜನೆಯ ಜಿಲ್ಲಾ ನಿರ್ದೇಶಕ ಶಂಕರ ಶೆಟ್ಟಿ ಮಾತನಾಡಿ, ವಿಪತ್ತು ನಿರ್ವಹಣೆ ತರಬೇತಿಯಡಿ ಕಾರವಾರ, ಕುಮಟಾ ಹಾಗೂ ಹೊನ್ನಾವರದಲ್ಲಿ ತಲಾ 100 ಸ್ವಯಂ ಸೇವಕರ ತಂಡ ರಚಿಸಿ ಸೂಕ್ತ ತರಬೇತಿ ನೀಡಲಾಗುತ್ತಿದೆ. ಈ ಸ್ವಯಂ ಸೇವಕರು ವಿಪತ್ತಿನ ಸಂದರ್ಭದಲ್ಲಿ ಜನರ ಪ್ರಾಣ ಹಾಗೂ ಸಂಪತ್ತಿನ ರಕ್ಷಣೆಗೆ ಕಟಿಬದ್ಧರಾಗಿರಬೇಕು ಎಂದರು.

ಯೋಜನಾಧಿಕಾರಿ ನಾಗರಾಜ ನಾಯ್ಕ ಸ್ವಾಗತಿಸಿದರು. ಉದ್ಯಮಿ ರವಿ ಗಾವಡಿ, ತರಬೇತುದಾರ ಜೈವಂತ ಪಟಗಾರ, ಕಾರವಾರ-ಅಂಕೋಲಾ ಕ್ಷೇತ್ರದ ಯೋಜನಾಧಿಕಾರಿ ಶೇಖರ ನಾಯ್ಕ, ಎಂಐಎಸ್ ಯೋಜನಾಧಿಕಾರಿ ನಾರಾಯಣ ಪಟಗಾರ, ಜ್ಞಾನವಿಕಾಸ ಸಮನ್ವಾಧಿಕಾರಿಗಳು, ವಿಪತ್ತು ಸಂಯೋಜಕರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net