ವಿಪ ಸದಸ್ಯ ಸುನೀಲಗೌಡ ಪಾಟೀಲರ ಕಳಕಳಿ, ಸರ್ಕಾದಿಂದ ಸಕಾರಾತ್ಮಕ ಸ್ಪಂದನೆ, ಗ್ರಾಪಂ ಸದಸ್ಯರ ಗೌರವ ಧನ ಹೆಚ್ಚಿಸಲು ಒತ್ತಾಯ

IMG-20210913-WA0027
Published on

ವಿಜಯಪುರ: ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ಸದಸ್ಯರ ಮಾಸಿಕ ಗೌರವ ಧನ ಹೆಚ್ಚಿಸುವ ಬಗ್ಗೆ ವಿಪ ಸದಸ್ಯ ಸುನೀಲಗೌಡ ಪಾಟೀಲರ ಪ್ರಸ್ತಾವನೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಈ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಪ್ರತಿಕ್ರಿಯಿಸಿದೆ.

ವಿಧಾನ ಪರಿಷತ್‌ನಲ್ಲಿ ವಿಪ ಸದಸ್ಯ ಸುನೀಲಗೌಡ ಪಾಟೀಲರು ಗ್ರಾಪಂ ಅಧ್ಯಕ್ಷರಿಗೆ ಮಾಸಿಕ 5 ಸಾವಿರ, ಉಪಾಧ್ಯಕ್ಷರಿಗೆ 4 ಸಾವಿರ ಮತ್ತು ಸದಸ್ಯರಿಗೆ 3ಸಾವಿರ ರೂ. ಗೌರವ ಧನ ನೀಡಲು ತಿಳಿಸಿದ್ದರು. ಇದಕ್ಕೆ ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪನವರ ಪರವಾಗಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದು ಸುನೀಲಗೌಡರ ಪ್ರಸ್ತಾವನೆ ಪರಿಶೀಲಿಸುವುದಾಗಿ ತಿಳಿಸಿದರು.

ಗ್ರಾಪಂ ಸದಸ್ಯರಿಗೆ ನೀಡುತ್ತಿದ್ದ ಗೌರವಧನ ತುಂಬಾ ಕಡಿಮೆ ಇದೆ. ಮತ್ತು ಗೌರವಧನ ಪರಿಷ್ಕರಿಸಿ 5ವರ್ಷಗಳು ಕಳೆದಿವೆ. ಆದ್ದರಿಂದ ನೀಡುತ್ತಿರುವ ಗೌರವಧನ ಸದ್ಯ ಬೆಲೆ ಏರಿಕೆಯಿಂದಾಗಿ ಏತಕ್ಕೂ ಸಾಲದಾಗಿದೆ. ಕಾರಣ ಕೂಡಲೇ ಸರ್ಕಾರ ಗೌರವ ಧನ ಹೆಚ್ಚಿಸಬೇಕೆಂದು ತಿಳಿಸಿದ್ದರು. ಇದಕ್ಕೆ ಉಳಿದ ಸದಸ್ಯರು ಸಹ ಬೆಂಬಲ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸರ್ಕಾರ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net