ವಿನೋಬನಗರ ಗಣೇಶ ವಿಸರ್ಜನೆ ಇಂದು: ಸಚಿವ ಎಸ್ಸೆಸ್ಸೆಂ ಚಾಲನೆ

Screenshot_2023-09-26-07-11-55-344_com.android.chrome.jpg
Published on

ದಾವಣಗೆರೆ: ಶ್ರೀ ವೀರವರಸಿದ್ಧಿ ವಿನಾಯಕ ಸೇವಾ ಸಮಿತಿ ವಿನೋಬ ನಗರದಲ್ಲಿ ಪ್ರತಿಷ್ಠಾಪಿಸಿರುವ ಗಣಪತಿ ವಿಸರ್ಜನೆ ಮಂಗಳವಾರ ನಡೆಯಲಿದೆ.

ಮಧ್ಯಾಹ್ನ 12 ಗಂಟೆಗೆ ಗಣೇಶಮೂರ್ತಿಯ ಭವ್ಯ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಚಾಲನೆ ನೀಡಲಿದ್ದಾರೆ ಎಂದು ಸಮಿತಿಯ ಕಾರ್ಯದರ್ಶಿ ಡಿ.ಕೆ.ರಮೇಶ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮಾಳ, ವೀರಗಾಸೆ, ಡೊಳ್ಳು, ನಂದಿಕೋಲು, ನಾಸಿಕ್ ಡೋಲು ಮೊದಲಾದ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಪಿ.ಬಿ.ರಸ್ತೆ, ಚನ್ನಮ್ಮ ವೃತ್ತ, ಹರಳೆಣ್ಣೆ ಕೊಟ್ರಬಸಪ್ಪ ವೃತ್ತ, ಶ್ರೀ ಚೌಡೇಶ್ವರಿ ದೇವಸ್ಥಾನ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ಬಾತಿ ಕೆರೆಯಲ್ಲಿ ವಿಸರ್ಜನೆ ಮಾಡಲಾಗುವುದು ಎಂದರು.

ವಿನೋಬನಗರ ಮಸೀದಿ ಬಳಿ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾರ ಹಾಕಿ ಮೆರವಣಿಗೆಗೆ ಸ್ವಾಗತಿಸುವರು ಎಂದು ತಿಳಿಸಿದರು.

ಸಮಿತಿ ಗೌರವಾಧ್ಯಕ್ಷ ಶಿವರಾಜ್ ದೇವರಮನೆ, ಅಧ್ಯಕ್ಷ ಗುರುನಾಥರಾವ್, ಉಪಾಧ್ಯಕ್ಷ ನಾಗರಾಜಗೌಡ್ರು, ಮಂಜುನಾಥ್ ಸುದ್ದಿಗೋಷ್ಠಿಯಲ್ಲಿದ್ದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net