ವಿಧಾನಸೌಧದಲ್ಲಿ ಇರುವವರೇ ಕನ್ನಡ ಕಾರ್ಯಕ್ಕೆ ಅಡ್ಡಿ

1607Klb02
Published on

ಕಲಬುರಗಿ: ಖಾಸಗಿ ಶಾಲೆಗಳಲ್ಲಿ ಕನ್ನಡ ಬಳಕೆ ಕುರಿತು ವಿಧಾನಸೌಧದಲ್ಲಿ ಇರುವ ಕೆಲವರು ಮತ್ತು ವಿಧಾನಸೌಧಕ್ಕೆ ಸಂಬಂಧಪಡದ ಕೆಲವರು ಅಡ್ಡಿಯಾಗಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಬೇಸರ ವ್ಯಕ್ತಪಡಿಸಿದರು.
ಖಾಸಗಿ ಶಾಲೆಗಳಲ್ಲಿ ಕನ್ನಡ ಉಳಿಸಬೇಕು ಎಂಬುದು ನಮ್ಮ ಆಸೆ. ಆದರೆ ಅದಕ್ಕೆ ಹಲವು ಅಡೆತಡೆಗಳಿವೆ. ಕೆಲವು ವಿಧಾನಸೌಧದಲ್ಲಿ ಕುಳಿತವರು ಕೂಡ ಸಹಕಾರ ನೀಡುವುದರಿಂದ ನಮ್ಮ ಕೆಲಸ ಅಷ್ಟು ಸುಲಭವಾಗಿ ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಇಂಗ್ಲಿಷ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಕಲಿಕೆಗೆ ಅವಕಾಶ ನೀಡುವಂತೆ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಹೇಳಿದರು.
ರಾಜ್ಯದಲ್ಲಿ ಶತಮಾನ ಕಂಡ ಕನ್ನಡ ಸರ್ಕಾರಿ, ಖಾಸಗಿ ಶಾಲೆಗಳನ್ನು ಸರ್ಕಾರದ, ಖಾಸಗಿ ಸಹಕಾರದಲ್ಲಿ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು. ರಾಜ್ಯದಲ್ಲಿನ ಕೈಗಾರಿಕೆಗಳಲ್ಲಿ ವೃಂದ ಸಿ, ಡಿ ಹುದ್ದೆಗಳಲ್ಲಿ ಶೇ.೮೦ ಕನ್ನಡಿಗರಿಗೆ, ಶೇ.೨೦ ಇತರರಿಗೆ ಮೀಸಲಿಡಬೇಕು ಎಂಬುದು ನಮ್ಮ ಬೇಡಿಕೆ. ಸರೋಜಿನಿ ಮಹಿಷಿ ವರದಿಯಂತೆ ಶೇ.೧೦೦ ಮೀಸಲು ನೀಡಲು ಒಕ್ಕೂಟ ವ್ಯವಸ್ಥೆಯಲ್ಲಿ ಅಸಾಧ್ಯ. ಸರ್ಕಾರ ಮನಸ್ಸು ಮಾಡಿದರೆ ಕನಿಷ್ಠ ಶೇ.೭೦ ನೀಡಬಹುದು ಎಂದರು. ಕನ್ನಡ ಉಳಿಸಿ ಬೆಳೆಸುವ ಕನಸ್ಸುಗಳ ಸಂಖ್ಯೆ ಹೆಚ್ಚಬೇಕು. ಗೋಕಾಕ್ ಮಾದರಿ ಚಳುವಳಿ ನಡೆಯಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net