

ಎನ್.ಆರ್.ಪುರ: ವಿದ್ಯೆ ಯಾರೂ ಕದಿಯಲಾಗದ ಸಂಪತ್ತು ಎಂದು ಬೆಂಗಳೂರಿನ ಉದ್ಯಮಿ, ದಾನಿ ಗದ್ದೇಮನೆ ವಿಶ್ವನಾಥ ತಿಳಿಸಿದರು.
ಶೆಟ್ಟಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯದಿನಾಚರಣೆ, ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಮಲೆನಾಡಿನ ಭಾಗದ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತುಕೊಟ್ಟು ಅವರಿಗೆ ಬೇಕಾದ ಶಾಲಾ ಪರಿಕರಗಳನ್ನು ನೀಡುತ್ತಿದ್ದೇನೆ. ಕುಗ್ರಾಮದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಹೆಚ್ಚು ಸಹಾಯ ಮಾಡುತ್ತಿದ್ದೇನೆ ಎಂದರು.
ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್.ಎಂ.ಕಾಂತರಾಜ್ ಮಾತನಾಡಿ, ದಾನಿ ವಿಶ್ವನಾಥ್ ಅವರು ಮಲೆನಾಡಿನ ಮಣ್ಣಿನ ಮಗನಾಗಿದ್ದಾರೆ. ಶಾಲಾ ದಿನಗಳಲ್ಲಿ ಅವರು ಅನುಭವಿಸಿದ ಕಷ್ಟ್ಟದ ದಿನಗಳನ್ನು ಗಮನದಲ್ಲಿ ಇರಿಸಿಕೊಂಡು ಮಲೆನಾಡು ಭಾಗದ ಮಕ್ಕಳು ಕೊರತೆ ಇಲ್ಲದ ಶಿಕ್ಷಣ ಪಡೆಯಬೇಕು ಎಂದು ಮಕ್ಕಳಿಗೆ ಸಹಾಯ ಮಾಡುತ್ತಿದ್ದಾರೆ ಎಂದರು.
ಗ್ರಾಪಂ ಮಾಜಿ ಉಪಾಧ್ಯಕ್ಷ ಗಾಂಧಿಗ್ರಾಮ ನಾಗರಾಜ್ ಮಾತನಾಡಿದರು. ಈ ಹಿಂದೆ ದಾನಿ ಎನ್.ಎಂ.ಕಾಂತರಾಜ್ ಭರವಸೆ ನೀಡಿದಂತೆ ಪ್ರತಿ ಮಕ್ಕಳಿಗೆ 1 ಸಾವಿರ ರೂಪಾಯಿ ಠೇವಣಿಯ ಬಾಂಡ್ ವಿತರಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಎಂ.ಜಗದೀಶ್, ಗ್ರಾಪಂ ಅಧ್ಯಕ್ಷೆ ಲಿಲ್ಲಿ ಮಾತುಕುಟ್ಟಿ, ಉಪಾಧ್ಯಕ್ಷ ಸುನೀಲ್‌ಕುಮಾರ್, ಸದಸ್ಯರಾದ ವಾಣಿ, ಶೈಲಾ, ಎ.ಬಿ.ಮಂಜುನಾಥ್, ಶೆಟ್ಟಿಕೊಪ್ಪ ಮಹೇಶ್, ಬೇಸಿಲ್, ಅಜಂತ, ಶ್ರೀಕಾಂತ್, ವಿಂಧ್ಯಾ, ಎಲ್ದೋ, ರಾಗಿಣಿ, ಶುಭಾ, ಅರುಣ್‌ಕುಮಾರ್, ರಾಧಾಮಣಿ, ಮಲ್ಲಿಕಾರ್ಜುನ್ ಇದ್ದರು.