

ಯಾದಗಿರಿ: ಜಾಗತೀಕರಣದ ಇಂದಿನ ದಿನಗಳಲ್ಲಿ ಹಳಿ ತಪ್ಪುತ್ತಿರುವ ಶೈಕ್ಷಣಿಕ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರುವ ಅಗತ್ಯವಿದೆ ಎಂದು ರಾಷ್ಟ್ರೊತ್ಥಾನ ಪರಿಷತ್ತಿನ ಪ್ರಶಿಕ್ಷಣ ಭಾರತಿಯ ಸಂಯೋಜಕ ಬಸವರಾಜ ಟಿ.ಕೆ. ತಿಳಿಸಿದರು.
ಇಲ್ಲಿನ ನವನಂದಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಪರಿಷತ್ತಿನ ಪ್ರಶಿಕ್ಷಣ ಭಾರತಿಯ ಘಟಕದಿಂದ ಆಯೋಜಿಸಿದ್ದ ಶಿಕ್ಷಕರ ಎರಡು ದಿನಗಳ ತರಬೇತಿ ಕಾಯರ್ಾಗಾರದಲ್ಲಿ ಮಾತನಾಡಿ, ಇಂದಿನ ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿವೆ. ವಿದ್ಯೆ ಎಂಬುದು ಕೇವಲ ಅಂಕಗಳಿಕೆಯ ಸಾಧನವಾಗದೆ, ಜ್ಞಾನವನ್ನು ಉಣ ಬಡಿಸುವ ಅಕ್ಷಯಪಾತ್ರೆ ಆಗಬೇಕಿದೆ ಎಂದು ತಿಳಿದರು.
ಸಮಾಜದಲ್ಲಿ ಸುಸ್ಥಿರ ಬದಲಾವಣೆ ತರಬೇಕು ಎಂಬ ಪರಿಕಲ್ಪನೆಯೊಂದಿಗೆ 1965 ರಲ್ಲಿ ಬೆಂಗಳೂರಿನಲ್ಲಿ ಆರಂಭಗೊಂಡ ಪರಿಷತ್ತು ದೊಡ್ಡದೊಡ್ಡ ಗಣ್ಯರನ್ನು, ತಜ್ಞರನ್ನು ಹಾಗೂ ಸಾಧಕರನ್ನು ಒಳಗೊಳ್ಳುವ ಮೂಲಕ ನಿರಂತರ ಸೇವಾ ಕಾರ್ಯದಲ್ಲಿದೆ. ಹಲವು ರಕ್ತನಿ ಘಟಕ ಮತ್ತು ಅನುವಂಶಿಕ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ತುತರ್ು ಆರೋಗ್ಯ ಸೇವೆ ನೀಡುತ್ತಿದೆ. ಇದರ ಜತೆಗೆ ಗೋವಂಶ ಬಲವರ್ಧನೆಗೆ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು.
ಶ್ರೀರಕ್ಷಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೃಷ್ಣಮೂತರ್ಿ ಕುಲಕಣರ್ಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಇಂದಿನ ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ಜತೆಗೆ ಮಾನವಿಯತೆಯನ್ನೂ ಕಲಿಸುವ ಅಗತ್ಯವಿದೆ. ಅದು ಕೇವಲ ಶಿಕ್ಷಕರಿಂದ ಮಾತ್ರ ಸಾಧ್ಯ, ಪಾಶ್ಚಾತ್ಯ ಶಿಕ್ಷಣದ ಪ್ರಭಾವದಿಂದ ನಮ್ಮ ಮಕ್ಕಳಿಗೆ ಸಂಬಂಧಗಳ ಬೆಲೆ ಗೊತ್ತಾಗದಂತಾಗಿದೆ. ಸ್ಪಧರ್ಾತ್ಮಕ ಜಗತ್ತಿನಲ್ಲಿ ನಮ್ಮ ಮಕ್ಕಳು ಮುಂದುವರೆಯಬೇಕಾದರೆ ಇಂಗ್ಲಿಷ್ ಕಲಿಕೆ ಅವಶ್ಯ. ಆದರೆ, ಮಾತೃ ಭಾಷೆಗೆ ಮೊದಲ ಆದ್ಯತೆ ಕೊಡಬೇಕು ಎಂದು ಪ್ರತಿಪಾದಿಸಿದರು.
ನಿವೃತ್ತ ದೈಹಿಕ ಶಿಕ್ಷಣಾಕಾರಿ ಶಂಕರ ಸೋನಾರ್ ಮಾತನಾಡಿ, ಸಮಾಜ ಸುಧಾರಣೆಯ ಬಹುದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ. ಮಗುವಿನ ಸವರ್ಾಂಗಿಣ ಅಭಿವೃದ್ಧಿಗೆ ಶಿಕ್ಷಕರ ನಿಸ್ವಾರ್ಥ ಸೇವೆ ಅನನ್ಯ. ರಾಷ್ಟ್ರೊತ್ಥಾನ ಪರಿಷತ್ತು ಕಳೆದ ಹಲವು ವರ್ಷಗಳಿಂದ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಬಸವರಾಜ ಶಿವರಾಯ, ಸಿಆರ್ಸಿ ಗುಂಡುರಾವ್, ಪರಿಷತ್ತಿನ ಜಿಲ್ಲಾ ಸಂಯೋಜಕ ಸಂಜೀವ ಕುಮಾರ ಇದ್ದರು.