ವಿದ್ಯೆ ಕಲಿಸಿದ ಗುರು, ಶಾಲೆಯನ್ನು ಮರೆಯದಿರಿ

aland2
ಆಳಂದ ತಾಲೂಕಿನ ಸರಸಂಬಾದ ಹಿರಿಯ ಪ್ರಾಥಮಿಕ, ಪ್ರೌಢಶಾಲೆಯಲ್ಲಿ 1994-95ರ ಬ್ಯಾಚ್‌ನ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಸಿಎಂ ಸಲಹೆಗಾರ ಬಿ.ಆರ್.ಪಾಟೀಲ್, ಸಿದ್ದರಾಮ ಪ್ಯಾಟಿ, ಸಂಗಣ್ಣ ಸನಗುಂದಿ, ಜಗನ್ನಾಥ ದೇಶಮುಖ, ಮಹಾದೇವಪ್ಪ ಪಾಟೀಲ್, ಗುರುಲಿಂಗಪ್ಪ ಪಾಟೀಲ್ ಇದ್ದರು.
Published on

ಆಳಂದ: ಜನ್ಮ ನೀಡಿದ ತಂದೆ-ತಾಯಿಯನ್ನು ಸದಾ ಗೌರವಿಸಬೇಕು. ಅಲ್ಲದೆ ನಮಗೆ ಅಕ್ಷರ ನೀಡಿದ ಗುರುಗಳು ಹಾಗೂ ನಮ್ಮ ಬಾಲ್ಯ ಕಳೆದ ಶಾಲೆಯನ್ನು ಎಂದಿಗೂ ಮರೆಯದಿರಿ ಎಂದು ಮುಖ್ಯಮಂತ್ರಿ ಸಲಹೆಗಾರ ಹಾಗೂ ಶಾಸಕ ಬಿ.ಆರ್.ಪಾಟೀಲ್ ಹೇಳಿದರು.

ಸರಸಂಬಾದ ಕ್ರಾಂತಿವೀರ ರಾಮಚಂದ್ರಪ್ಪ ಪಾಟೀಲ್ ಹಿರಿಯ ಪ್ರಾಥಮಿಕ ಹಾಗೂ ಎಸ್.ನಿಜಲಿಂಗಪ್ಪ ಗ್ರಾಮೀಣ ವಸತಿ ಪ್ರೌಢಶಾಲೆಯಲ್ಲಿ 1994-95ನೇ ಬ್ಯಾಚ್‌ನ ವಿದ್ಯಾರ್ಥಿಗಳಿಂದ ಮಂಗಳವಾರ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಭಾಗದ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತು, ಇದೀಗ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವ ವಿದ್ಯಾರ್ಥಿಗಳು ಅಕ್ಷರ ನೀಡಿದ ಗುರುಗಳಿಗೆ ನಮನ ಸಲ್ಲಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು.

ಸಮತಾ ಲೋಕ ಶಿಕ್ಷಣ ಸಮಿತಿ ಆಡಳಿತಾಧಿಕಾರಿ ಮಹಾದೇವಪ್ಪ ಪಾಟೀಲ್, ಶಿಕ್ಷಕ ಡಿ.ಎಂ.ಪಾಟೀಲ್, ಬಸವರಾಜ ಕೋರಳ್ಳಿ, ಮಾಣಿಕ ಘೋಡಕೆ, ರಮೇಶ ಖಾನಾಪುರೆ, ಅನೀತಾ ಭಕರೆ, ಕೇದರನಾಥ ಗೋವಿನ, ಕರುಣಾ ಪಾಟೀಲ್ ಮಾತನಾಡಿದರು.

ಜಿಪಂ ಮಾಜಿ ಸದಸ್ಯ ಸಿದ್ದರಾಮ ಪ್ಯಾಟಿ, ಪ್ರಮುಖರಾದ ಪಂಡಿತ ಜಿಡಗೆ, ಜಗನ್ನಾಥ ದೇಶಮುಖ, ಗುರುಲಿಂಗಪ್ಪ ಪಾಟೀಲ್, ಹಜರತ ಪಟೇಲ್, ಪಂಡಿತ ಖಾನಾಪುರೆ, ಸಂಗಣ್ಣ ಸನಗುಂದಿ, ಸಿದ್ರಾಮಪ್ಪ ಮಡ್ಡೆ, ವಿಜಯಕುಮಾರ ಮಾಶಾಳೆ, ಅಣ್ಣಾರಾವ ಬುರಾನಪುರೆ, ಸಂದೀಪ್ ಕಾಸರ್, ಸಚಿನ್ ಭಕರೆ, ಜಲಜಾಕ್ಷಿ ಕೋರೆ, ಸುವರ್ಣಾ ಕಿಣಗಿ, ಸುಮಿತ್ರಾ ಖಾನಾಪುರೆ, ವಿಜಯಕುಮಾರ ಗುಂಜುಟಿ, ರವಿಚಂದ್ರ ಪೈಲ್ವನ್ ಇತರರಿದ್ದರು.

ಸಿz್ದೆÃಶ್ವರಿ ಭಿಕಮಾಳೆ ಸ್ವಾಗತಿಸಿದರು. ಮಲ್ಲಿನಾಥ ಕುಂಬಾರ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯಗುರು ವಿಠ್ಠಲ ಹವಲ್ದಾರ ನಿರೂಪಣೆ ಮಾಡಿದರು. ಹುಸೇನ್ ಭಾಷಾ ಶೇಖ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net