ವಿದ್ಯುನ್ಮಾನ ಮತ ಯಂತ್ರಗಳ ಆಗಮನ

Electronic, Voting Machine, Ind., Adarsh __Mahavidyalaya, Security Room,
ಇಂಡಿ ಪಟ್ಟಣಕ್ಕೆ ಬಂದ ಮತ ಯಂತ್ರಗಳನ್ನು ಆದರ್ಶ ವಿದ್ಯಾಲಯದ ಭದ್ರತಾ ಕೋಣೆಗೆ ಸಾಗಿಸುತ್ತಿರುವುದು. ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಇದ್ದರು.
Published on

ವಿದ್ಯುನ್ಮಾನ, ಮತಯಂತ್ರ, ಇಂಡಿ, ಆದರ್ಶ ಮಹಾವಿದ್ಯಾಲಯ, ಭದ್ರತಾ ಕೋಣೆ, Electronic, Voting Machine, Ind., Adarsh ​​Mahavidyalaya, Security Room,

ಇಂಡಿ: ವಿಜಯಪುರದಿಂದ ಇಂಡಿ ಪಟ್ಟಣದ ಆದರ್ಶ ಮಹಾವಿದ್ಯಾಲಯದ ಭದ್ರತಾ ಕೋಣೆಗೆ ಲೋಕಸಭಾ ಚುನಾವಣೆ ನಿಮಿತ್ತ ವಿದ್ಯುನ್ಮಾನ ಮತ ಯಂತ್ರಗಳನ್ನು ತರಲಾಯಿತು ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿ, 337 ಕಂಟ್ರೋಲ್ ಯುನಿಟ್ ಮತಯಂತ್ರಗಳು, 337 ಬ್ಯಾಲೆಟ್ ಯುನಿಟ್ ಮತಯಂತ್ರಗಳು ಮತ್ತು 359 ವಿವಿ ಪ್ಯಾಡ್‌ಗಳನ್ನು ಇಂಡಿಗೆ ಬಿಗಿ ಭದ್ರತೆಯಲ್ಲಿ ತರಲಾಗಿದೆ. ನಾಮಪತ್ರ ಪ್ರಕ್ರಿಯೆ ಮುಗಿದ ನಂತರ ಇಂಡಿಯಲ್ಲಿಯೇ ಮತಯಂತ್ರಗಳಲ್ಲಿ ಬ್ಯಾಲೆಟ್ ಪೇಪರ್ ವ್ಯವಸ್ಥೆ ಮಾಡಲಾಗುವುದು ಎಂದು ಗದ್ಯಾಳ ತಿಳಿಸಿದರು.

ತಹಸೀಲ್ದಾರ್ ಮಂಜುಳಾ ನಾಯಕ, ಚುನಾವಣೆ ಶಿರಸ್ತೆದಾರ್ ಆರ್.ಬಿ. ಮೂಗಿ ಮತ್ತು ಚುನಾವಣೆ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net