ವಿದ್ಯುತ್​ ತಗುಲಿ ಯುವ ರೈತ ಬಲಿ

crime
Published on

ಬಸವಕಲ್ಯಾಣ: ಗುಂಡೂರ ಗ್ರಾಮದಲ್ಲಿ ಬೆಳೆಗೆ ನೀರುಣಿಸಲು ಪಂಪ್ ಸ್ಟಾರ್ಟ್​ ಮಾಡಲು ಹೋದ ಯುವ ರೈತನೊಬ್ಬ ವಿದ್ಯುತ್ ತಗುಲಿ ಮೃತಪಟ್ಟಿದ್ದಾನೆ. ವಿಕಾಸ ಸೂರ್ಯವಂಶಿ(25) ಮೃತಪಟ್ಟವ. ಕಬ್ಬಿನ ಗದ್ದೆಗೆ ನೀರು ಹರಿಸಲು ಮೋಟಾರ್ ಸ್ಟಾರ್ಟ್​ ಮಾಡುವಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿದೆ. ಪ್ರಜ್ಞೆ ತಪ್ಪಿ ಬಿದ್ದಿದ್ದ ಈತನನ್ನು ಸ್ಥಳೀಯರು ಮಂಠಾಳ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರುವ ವೇಳೆ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ. ಪಿಎಸ್ಐ ಬಸಲಿಂಗಪ್ಪ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮಂಠಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net