ವಿದ್ಯುತ್​ ಕೇಂದ್ರ ಸ್ಥಾಪನೆಗೆ ಪ್ರಸ್ತಾವನೆ - ರಮೇಶ ಕತ್ತಿ

ramesh katti
Published on

ಹುಕ್ಕೇರಿ: ತಾಲೂಕಿನ ನೇರ್ಲಿ ಗ್ರಾಮದ ಹತ್ತಿರ 400 ಎಂವಿಎ ವಿದ್ಯುತ್​ ಕೇಂದ್ರ ಸ್ಥಾಪಿಸುವುದಕ್ಕೆ ಸಚಿವ ಉಮೇಶ ಕತ್ತಿ ಅವರು ಇಂಧನ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಬಿಡಿಸಿಸಿ ಬ್ಯಾಂಕ್​ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

ಪಟ್ಟಣದ ಹೊರವಲಯದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್​ ಸಹಕಾರಿ ಸಂದಿಂದ ಪ್ರಾರಂಭಿಸಲಾದ ನೂತನ ಟಿಸಿಗೆ ಚಾಲನೆ ನೀಡಿ ಅವರು ಮಾತನಾಡಿದರು. ನೇರ್ಲಿ ಗ್ರಾಮದ ಹತ್ತಿರ 400 ಎಂವಿಎ ವಿದ್ಯುತ್​ ಕೇಂದ್ರ ಸ್ಥಾಪನೆಯಿಂದ ವಿಜಯಪುರ, ಬಾಗಲಕೋಟೆ, ಕಾರವಾರ ಜಿಲ್ಲೆಗಳಿಗೆ ವಿದ್ಯುತ್​ ವಿತರಣೆಯಾಗಲಿದೆ.

ಬೆಲ್ಲದ ಬಾಗೇವಾಡಿಯ 110/11 ಕೆವಿ ವಿದ್ಯುತ್​ ಉಪಕೇಂದ್ರದ ರಚನಾ ಕಾರ್ಯ ಮುಕ್ತಾಯ ಹಂತದಲ್ಲಿದೆ. ಇದರಿಂದ ಬಾಗೇವಾಡಿ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಹಗಲು ಹೊತ್ತಿನಲ್ಲಿ 7 ಗಂಟೆ ವಿದ್ಯುತ್​ ವಿತರಣೆಯಾಗಲಿದೆ. ಬೆಳವಿ, ನಿಡಸೋಸಿ, ಶೇಕಿನ ಹೊಸೂರ ಮತ್ತು ಪಾಶ್ಚಾಪುರ ಗ್ರಾಮಗಳಲ್ಲಿ ಹೊಸ ವಿದ್ಯುತ್​ ಕೇಂದ್ರಗಳ ಸ್ಥಾಪನೆಗೆ ಆಡಳಿತ ಮಂಡಳಿಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್​ ಪೂರೈಸಲು ಸಂವು ಸಕಲ ಸಿದ್ಧತೆಯಲ್ಲಿದೆ ಎಂದರು.

ಪುರಸಭೆ ಸದಸ್ಯ ರಾಜು ಮುನ್ನೋಳಿ, ಮಹಾಂತೇಶ ತಳವಾರ, ಮುಖಂಡರಾದ ಚನ್ನಪ್ಪ ಗಜಬರ, ಇರ್ಷಾದ್​ ಮೊಕಾಶಿ, ಭಾಪು ನಾಯಿಕ, ಶಹಜಾನ್​ ಬಡಗಾಂವಿ, ಕುಮಾರ ಜುಟಾಳೆ, ಮುನ್ನಾ ಕಳಾವಂತ, ಅಪ್ಪಾಸಾಹೇಬ ಸಂಕನ್ನವರ, ಗೋಪಾಳ ಅಂಬಾರಿ, ಬಾಬು ದನೋಡೆ, ಪ್ರಕಾಶ ಕೊಟಬಾಗಿ, ಶೋಭಾ ನಾಯಿಕ, ವಿದ್ಯುತ್​ ಸಹಕಾರಿ ಸಂದ ಸ್ಥಾನಿಕ ಅಭಿಯಂತ ನೇಮಿನಾಥ ಖೇಮಲಾಪುರೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net