ವಿದ್ಯುತ್‌ಶಾಕ್ ತಗುಲಿ ಲೈನ್‌ಮೆನ್ ಮೃತ

15 YERRISWAMY 04
Published on

ಬಳ್ಳಾರಿ : ಇಲ್ಲಿನ ಎಂಆರ್‌ವಿ ಲೇಔಟ್‌ನಲ್ಲಿ ವಿದ್ಯುತ್ ಕಂಬದ ಡ್ಯೂಯಲ್ ಸರಿಪಡಿಸುವ ವೇಳೆ ವಿದ್ಯುತ್ ಶಾಕ್ ತಗುಲಿ ಲೈನ್‌ಮೆನ್‌ಯೊಬ್ಬರು ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದ ನಿವಾಸಿ ನಂಜುಂಡ (32)ಮೃತ. ವಿದ್ಯುತ್ ಕಂಬಕ್ಕೆ ಡ್ಯೂಯಲ್ ದುರಸ್ತಿ ವೇಳೆ ಫೀಡರ್‌ನಲ್ಲಿ ಲೋಡ್ ಕಡಿಮೆಯಿದೆ ಎಂಬ ಅತಿಯಾದ ಆತ್ಮವಿಶ್ವಾಸದಿಂದ, ಸೆಕ್ಷನ್ ಆಫೀಸರ್ ಮೂಲಕ ಲೈನ್ ಕ್ಲಿಯರನ್ಸ್ ಪಡೆಯದೆ ದುರಸ್ತಿಗೆ ಮುಂದಾಗಿದ್ದಾರೆ. ಈ ವೇಳೆ ವಿದ್ಯುತ್ ಶಾಕ್ ತಗುಲಿದೆ, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವಾಗ ರಸ್ತೆಯ ಮಧ್ಯೆದಲ್ಲಿ ಮೃತಪಟ್ಟಿದ್ದಾನೆ. ಜಿಲ್ಲೆಯ ವಿದ್ಯುತ್ ಪರಿವೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net