ವಿದ್ಯುತ್​ ಸ್ಪರ್ಶಿಸಿ ಚಿರತೆ, ಕಾಡುಬೆಕ್ಕು ಸಾವು

Published on

ಕೊರಟಗೆರೆ: ಕೋರಾ ಹೋಬಳಿಯ ಕೆಸ್ತೂರು ಪಂಚಾಯಿತಿ ವ್ಯಾಪ್ತಿಯ ಕೋಡಿಹಳ್ಳಿ- ಕಂಚೇನಹಳ್ಳಿ ರಸ್ತೆ ಬದಿ ಜಮೀನಿನಲ್ಲಿ ವಿದ್ಯುತ್​ ಸ್ಪರ್ಶದಿಂದ ಚಿರತೆ ಮತ್ತು ಕಾಡುಬೆಕ್ಕು ಮೃತಪಟ್ಟಿವೆ. ಬುಧವಾರ ಮಧ್ಯಾಹ್ನ ಜಮೀನು ಮಾಲೀಕರು ಹೆಚ್ಚು ನೊಣಗಳ ಸಂಚಾರ ಗಮನಿಸಿ ಸ್ಥಳ ಪರಿಶೀಲಿಸಿದಾಗ, ವಿದ್ಯುತ್​ ಟ್ಯಾನ್ಸ್​ಾರ್ಮರ್​ ಕಂಬದ ಮೇಲೆ ಕಾಡುಬೆಕ್ಕು ಮತ್ತು ಅದರ ಪಕ್ಕ ಚಿರತೆ ಕಳೇಬರ ಕಂಡುಬಂದಿದೆ. ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳಲು ಕಾಡುಬೆಕ್ಕು ವಿದ್ಯುತ್​ ಕಂಬ ಏರಿದ್ದು, ಕಾಡುಬೆಕ್ಕು ಹಿಡಿಯಲು ಚಿರತೆಯೂ ಕಂಬ ಏರಿದ ವೇಳೆ ವಿದ್ಯುತ್​ ಸ್ಪರ್ಶಿಸಿದೆ ಎನ್ನಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net