ವಿದ್ಯುತ್ ಸ್ಪರ್ಶದಿಂದ ಸೆಸ್ಕ್ ನೌಕರ ಸಾವು

Published on

ವೀರಾಜಪೇಟೆ: ಪಟ್ಟಣದ ಹೊರವಲಯದ ಕುಟ್ಟಂದಿ ಗ್ರಾಮದಲ್ಲಿ ಕರ್ತವ್ಯನಿರತ ಸೆಸ್ಕ್ ನೌಕರ ವಿದ್ಯುತ್ ಸ್ಪರ್ಶದಿಂದ ಭಾನುವಾರ ಮೃತಪಟ್ಟಿದ್ದಾನೆ.
ಮೂಲತಃ ಬಾಗಲಕೋಟೆ ಜಿಲ್ಲೆ ಮಾರ್ನಾಲು ಗ್ರಾಮದ ನಿವಾಸಿ ಬಸವರಾಜ ತೆಗ್ಗಿ (26) ಮೃತಪಟ್ಟವರು.


ಕಳೆದ ಐದು ವರ್ಷಗಳಿಂದ ವಿರಾಜಪೇಟೆ ಸೆಸ್ಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಸವರಾಜ ಭಾನುವಾರ ಬೆಳಗ್ಗೆ ಕುಟ್ಟಂದಿ ಗ್ರಾಮದ ಮನೆಯೊಂದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ವೇಳೆ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತದೇಹವನ್ನು ಇರಿಸಲಾಗಿದ್ದು, ಕುಟುಂಬದವರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net