ವಿದ್ಯುತ್ ಸ್ಪರ್ಶದಿಂದ ಕಾರ್ಮಿಕ ಸಾವು

Published on

ರಕಲಗೂಡು: ತಾಲೂಕಿನ ದೊಡ್ಡಮಗ್ಗೆ ಹೋಬಳಿ ಮುದ್ದನಹಳ್ಳಿಯಲ್ಲಿರುವ ಇಟ್ಟಿಗೆ ಕಾರ್ಖಾನೆಯಲ್ಲಿ ಯಂತ್ರದ ಮೂಲಕ ಇಟ್ಟಿಗೆ ತಯಾರಿಸುತ್ತಿದ್ದ ಕಾರ್ಮಿಕ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾನೆ.


ಮೃತನನ್ನು ಬಿಹಾರ ಮೂಲದ ಮದನ್ ಸಾಹ ಎಂದು ಗುರುತಿಸಲಾಗಿದೆ. ಬಿಹಾರ ಮೂಲದ ದಿನೇಶ್ ಸಾಹ ಮತ್ತು ಮದನ್ ಸಾಹ ಎಂಬ ಕಾರ್ಮಿಕರು 3 ತಿಂಗಳಿಂದ ಮುದ್ದನಹಳ್ಳಿ ಗ್ರಾಮದ ಮಂಜು ಎಂಬುವರ ಮಾಲೀಕತ್ವದ ಎಂಎನ್‌ಎಂ ಹಾಲೋ ಬ್ರಿಕ್ಸ್ ಫ್ಯಾಕ್ಟರಿಯಲ್ಲಿ ಇಟ್ಟಿಗೆ ತಯಾರಿಸುವ ಕೆಲಸ ಮಾಡಿಕೊಂಡಿದ್ದರು. ಇಟ್ಟಿಗೆ ತಯಾರಿಸುವ ಯಂತ್ರದಲ್ಲಿ ಲೋಪ ಉಂಟಾಗಿ ಆಗಿಂದಾಗ್ಗೆ ವಿದ್ಯುತ್ ಹರಿಯುತ್ತಿತ್ತು. ಈ ಬಗ್ಗೆ ತಿಳಿಸಿದ್ದರೂ ಮಾಲೀಕ ಯಂತ್ರವನ್ನು ದುರಸ್ತಿ ಮಾಡಿಸಿರಲಿಲ್ಲ ಎನ್ನಲಾಗಿದೆ.
ಆ.27 ರಂದು ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಮದನ್ ಸಾಹ ಯಂತ್ರದ ಮೂಲಕ ಇಟ್ಟಿಗೆ ತಯಾರಿಸುತ್ತಿದ್ದಾಗ ಇಟ್ಟಿಗೆ ಕಾರ್ಖಾನೆಗೆ ವಿದ್ಯುತ್ ಸಂಪರ್ಕ ಪಡೆದಿರುವ ಟ್ರಾನ್ಸ್‌ಫಾರ್ಮರ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದ್ದರಿಂದ ಇಟ್ಟಿಗೆ ತಯಾರಿಸುವ ಯಂತ್ರಕ್ಕೆ ಹೆಚ್ಚಿನ ಪ್ರಮಾಣದ ವಿದ್ಯುತ್ ಹರಿದ ಪರಿಣಾಮವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ.


ಅರಕಲಗೂಡು ಪೊಲೀಸರು ಇಟ್ಟಿಗೆ ಕಾರ್ಖಾನೆ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net