ವಿದ್ಯುತ್ ಸ್ಪರ್ಶದಿಂದ ಕಾಡಾನೆ ಸಾವು

30LDH2 web
Published on

ಲಿಂಗದಹಳ್ಳಿ: ತರೀಕೆರೆ ತಾಲೂಕು ನಂದಿಬಟ್ಟಲು ಸರ್ವೆ ನಂ.13ರಲ್ಲಿ ಮಂಗಳವಾರ ತಡರಾತ್ರಿ ಕೃಷಿ ಜಮೀನಿಗೆ ಅಳವಡಿಸಿದ್ದ ತಂತಿ ಬೇಲಿಯಿಂದ ವಿದ್ಯುತ್ ಪ್ರವಹಿಸಿ 20 ವರ್ಷದ ಗಂಡು ಕಾಡಾನೆ ಮೃತಪಟ್ಟಿದೆ. ಕಾಡುಪ್ರಾಣಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ಲೀಲಾವತಿ ಎಂಬುವರು ಮೆಕ್ಕೆಜೋಳ ಹೊಲದ ತಂತಿ ಬೇಲಿಗೆ ಜಮೀನಿನಲ್ಲೇ ಇರುವ ಮನೆಯಿಂದ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರು.

ಮೆಕ್ಕೆಜೋಳ ತಿನ್ನುವ ಆಸೆಯಿಂದ ಕಾಡಾನೆ ನುಗ್ಗಿದೆ. ಆಗ ವಿದ್ಯುತ್ ಶಾಕ್​ನಿಂದ ಪಕ್ಕದಲ್ಲೇ ಇರುವ ಕಂದಕಕ್ಕೆ ಬಿದ್ದು ಆನೆ ಮೃತಪಟ್ಟಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ತಣಿಗೆಬೈಲು ವಲಯ ಅರಣ್ಯದ ಸೆರಗಿನಲ್ಲಿರುವ ನಂದಿಬಟ್ಟಲು ಗ್ರಾಮದ ಆಸುಪಾಸು ಕಳೆದ 5 ವರ್ಷಗಳಲ್ಲಿ 5 ಕಾಡಾನೆಗಳು ವಿದ್ಯುತ್ ತಗುಲಿ ಸಾವಿಗೀಡಾಗಿವೆ. ಸ್ಥಳ ಪರಿಶೀಲನೆಗಾಗಿ ಬರುವ ಅರಣ್ಯ ಇಲಾಖೆ ಅಧಿಕಾರಿಗಳು ಕಂದಕ ನಿರ್ವಿುಸುವ ಭರವಸೆ ನೀಡುತ್ತಾರೆ. ಮತ್ತೆ ಇತ್ತ ಕಡೆ ಸುಳಿಯುವುದಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net