ವಿದ್ಯುತ್ ಸ್ಪರ್ಶದಿಂದ ಇಬ್ಬರ ಸಾವು

IMG_20230220_233615.jpg
Published on

ದಾವಣಗೆರೆ:ತಾಲೂಕಿನ ಬಾಡಾ ಗ್ರಾಮದ ಅಡಕೆ ತೋಟದಲ್ಲಿ ಸೋಮವಾರ ಬೆಳಗ್ಗೆ, ಪಂಪ್‌ಸೆಟ್‌ನ ವಿದ್ಯುತ್ ಪ್ರವಹಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತೋಟದ ಮಾಲೀಕ ಕೆ.ಎಂ.ಚಂದ್ರಶೇಖರಪ್ಪ (71), ಟ್ರ್ಯಾಕ್ಟರ್ ಚಾಲಕ ಮಂಜುನಾಥ (52) ಮೃತರು. ಅಡಕೆ ತೋಟಕ್ಕೆ ನೀರು ಹಾಯಿಸಲು ಹೋಗಿದ್ದಾಗ ಪಂಪ್‌ಸೆಟ್‌ನ ಪೆನಾಲ್ ಬೋರ್ಡ್‌ನ ಮೂಲಕ ವಿದ್ಯುತ್ ಸ್ಪರ್ಶವಾಗಿ ಅವಘಡ ಸಂಭವಿಸಿದೆ. ಚಂದ್ರಶೇಖರಪ್ಪ ಅವರ ಪುತ್ರ ಚೇತನ್ ನೀಡಿದ ದೂರಿನನ್ವಯ ಮಾಯಕೊಂಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net