ಹಾಸನ: ಅರಸೀಕೆರೆ ತಾಲೂಕಿನ ಬಾಣಾವರ ಹೋಬಳಿಯ ಗಿರಿಗೌಡನ ಕೊಪ್ಪಲು ಗ್ರಾಮದ ಕೃಷಿ ಜಮೀನಿನಲ್ಲಿ ಭಾನುವಾರ ವಿದ್ಯುತ್ ಸ್ಪರ್ಶಿಸಿ ಕೃಷಿಕ ಮಂಜುನಾಥ್(40) ಮೃತಪಟ್ಟಿದ್ದಾರೆ.
ತೋಟಕ್ಕೆ ತೆರಳಿ ಹಲವು ತಾಸು ಕಳೆದರೂ ಮಂಜುನಾಥ್ ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ಹೋಗಿ ಪರಿಶೀಲನೆ ನಡೆಸಿದ ವೇಳೆ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವುದು ಗೊತ್ತಾಗಿದೆ. ಸೆಸ್ಕ್ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಹಾರದ ಭರವಸೆ ನೀಡಿದ್ದಾರೆ. ಈ ಸಂಬಂಧ ಬಾಣಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.