ವಿದ್ಯುತ್ ಸೌಲಭ್ಯ, ದಿನಸಿ ವಿತರಣೆ

13Rajesh5
Published on

ಚಾಮರಾಜನಗರ: ನಗರದಲ್ಲಿ ವಿದ್ಯುತ್ ಸೌಲಭ್ಯವಿಲ್ಲದ ಎರಡು ಮನೆಗಳಿಗೆ ಕರೆಂಟ್ ವ್ಯವಸ್ಥೆ ಮತ್ತು ದಿನಸಿ ಪದಾರ್ಥಗಳನ್ನು ರವಿ ಸಂತು ಬಳಗದ ಸದಸ್ಯರು ಮಂಗಳವಾರ ವಿತರಣೆ ಮಾಡಿದರು.

ನಗರದ ರೈಲ್ವೆ ಬಡಾವಣೆಯಲ್ಲಿರುವ ಎರಡು ಕುಟುಂಬಗಳಿಗೆ ನೆರವಿನ ಹಸ್ತ ಚಾಚಿ, ಸುಮಾರು 20 ವರ್ಷಗಳಿಂದ ವಿದ್ಯುತ್ ಸೌಲಭ್ಯವಿಲ್ಲದ ಮನೆಗಳಿಗೆ ಕರೆಂಟ್ ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ. ಜತೆಗೆ ದಿನಸಿ ಪದಾರ್ಥಗಳನ್ನು ನೀಡಿದರು. ಈ ಸಂದರ್ಭದಲ್ಲಿ ರವಿ ಸಂತು, ಸುರೇಶ್ ಗೌಡ, ಉಮ್ಮತ್ತೂರು ಚಂದ್ರು, ರಾಮದಾಸ್, ರವಿ ಹಂಸಲೇಖ, ಶ್ರೀನಿವಾಸ್ ಹುಣಸೂರು, ಅನುಭವ್ಯ, ಕಿರಣ್, ಸಿಂಚನಾ, ಶ್ವೇತಾ, ಪದ್ಮಾ, ಲೋಕೇಶ್, ಚಂದ್ರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net