ವಿದ್ಯುತ್ ಸಮಸ್ಯೆಗಳಿಗೆ ಸಹಾಯವಾಣಿ

Published on

ಚಾಮರಾಜನಗರ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಚಾಮರಾಜನಗರ ಉಪವಿಭಾಗದ ಅಧೀನದಲ್ಲಿ 4 ಶಾಖಾ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ವಿದ್ಯುತ್ ಸಂಬಂಧಿತ ಅಪಾಯಕಾರಿ ಸ್ಥಿತಿಯಲ್ಲಿರುವ ಸ್ಥಳಗಳು ಕಂಡುಬಂದಲ್ಲಿ ಹಾಗೂ ವಿದ್ಯುತ್ ಸಂಬಂಧಿತ ಯಾವುದೇ ಸಮಸ್ಯೆಗಳಿದ್ದಲ್ಲಿ ಸಂಬಂಧಪಟ್ಟ ಕಚೇರಿಯ ಶಾಖಾಧಿಕಾರಿಗಳ ದೂರವಾಣಿ ಸಂಖ್ಯೆಗೆ ಕರೆಮಾಡಿ ಪರಿಹರಿಸಿಕೊಳ್ಳಬಹುದು.

24*7 ದೂರು ನಿರ್ವಹಣಾ ಕೇಂದ್ರದ ಶಾಖಾ ಕಚೇರಿಯ ದೂ.ಸಂ 08226-225038, 9449598686, 944959866 ಚಾಮರಾಜನಗರ ಶಾಖಾ ಕಚೇರಿಯ ಮೊ.ಸಂ 9448994867, ರಾಮಸಮುದ್ರ ಶಾಖಾ ಕಚೇರಿಯ ಮೊ.ಸಂ 9448499918, ಮಾದಪುರ ಶಾಖಾ ಕಚೇರಿಯ ಮೊ.ಸಂ 9448994868, ಹಾಗೂ ಬದನಗುಪ್ಪೆ ಶಾಖಾ ಕಚೇರಿಯ ಮೊ.ಸಂ 9480810364, ಅನ್ನು ಸಂಪರ್ಕಿಸಬಹುದು ಎಂದು ನಿಗಮದ ಕಾರ್ಯ ಮತ್ತು ಪಾಲನೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net