ವಿದ್ಯುತ್ ಸಂಘದ ಚುನಾವಣೆಯಲ್ಲಿ ಕತ್ತಿ ಬೆಂಬಲಿತ ಸ್ವಾಭಿಮಾನಿ ಪೆನಲ್ ಗೆ ಭರ್ಜರಿ ಗೆಲವು

IMG-20250929-WA0002
Published on

ವಿದ್ಯುತ್ ಸಂಘದ ಚುನಾವಣೆಯಲ್ಲಿ ಕತ್ತಿ ಬೆಂಬಲಿತ ಸ್ವಾಭಿಮಾನಿ ಪೆನಲ್ ಗೆ ಭರ್ಜರಿ ಗೆಲವು

ಹುಕ್ಕೇರಿ : ದೇಶದ ಏಕೈಕ ಸಹಕಾರಿ ವಿದ್ಯುತ್ ಸಂಸ್ಥೆಯಾಗಿರುವ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಆಡಳಿತ‌‌ ಮಂಡಳಿಗೆ ನಡೆದ ಕತ್ತಿ ಹಾಗೂ ಜಾರಕಿಹೊಳಿ‌, ಜೊಲ್ಲೆ ಕುಟುಂಬದ ನಡುವೆ ಜಿದ್ದಾಜಿದ್ದಿನ ಚುನಾವಣೆಯಲ್ಲಿ ರಮೇಶ್ ಕತ್ತಿ ಮತ್ತು ಎ.ಬಿ.ಪಾಟೀಲ ಬೆಂಬಲಿತ 15 ಅಭ್ಯರ್ಥಿಗಳು ಗೆದ್ದು ಬೀಗಿದ್ದಾರೆ.

ಹುಕ್ಕೇರಿ ಪಟ್ಟಣದ ಹೊರವಲಯದ ಬಾಪೂಜಿ ಶಾಲೆಯಲ್ಲಿ ಭಾನುವಾರ ನಡೆದ ಮತ ಏಣಿಕೆಯಲ್ಲಿ ಅಂತಿಮವಾಗಿ ಕತ್ತಿ ಬೆಂಬಲಿತ ಸ್ವಾಭಿಮಾನಿ ಪೆನಲ್ ನ 15 ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.

ಆಯ್ಕೆಯಾದ ಅಭ್ಯರ್ಥಿಗಳು:

ಕತ್ತಿ ಬೆಂಬಲಿತ ಸ್ವಾಭಿಮಾನಿ ಪೆನಲ್ ಅಭ್ಯರ್ಥಿಗಳಾಗಿದ್ದ ಸನ್ನಾಯಿಕ ಶ್ರೀಮಂತ ಗಂಗಪ್ಪ (ಪರಿಶಿಷ್ಟ ಜಾತಿ), ಲಂಕೆಪ್ಪಗೋಳ ಬಸವಣ್ಣಿ ಸಣ್ಣಪ್ಪ( ಪರಿಶಿಷ್ಟ ಪಂಗಡ), ಗಜಾನನ ಕ್ವಳ್ಳಿ ( ಹಿಂದುಳಿದ ವರ್ಗದ ಅ) , ಸತ್ಯಪ್ಪ ನಾಯಿಕ ( ಹಿಂದುಳಿದ ಬ), ನಾಯಿಕವಾಡಿ ಮಹಬೂಬಿ ಗೌಸ ಆಜಂ, ಮೂಡಲಗಿ ಮಂಗಲ ಗುರುಸಿದ್ದಪ್ಪಾ (ಮಹಿಳಾ ಮೀಸಲು), ಸಾಮಾನ್ಯ ಕ್ಷೇತ್ರದಿಂದ ಕತ್ತಿ ಲವ ರಮೇಶ, ಕಲಗೌಡ ಪಾಟೀಲ, ವಿನಯ ಪಾಟೀಲ, ಮಹಾವೀರ ನಿಲಜಗಿ, ಶಿವಾನಂದ ಮುಡಶಿ, ಮಹಾದೇವ ಕ್ಷೀರಸಾಗರ, ಮದವಾಲ ಶಿವನಗೌಡ ಸತ್ಯಪ್ಪ, ಮುನ್ನೋಳಿ ಲಕ್ಷ್ಮಣ ಬಸವರಾಜ, ವಾಸೇದಾರ ಕೆಂಪಣ್ಣಾ ಸಾತಪ್ಪ ಜಯ ಸಾಧಿಸಿದ್ದಾರೆ.

ಭಾನುವಾರ ನಡೆದ ಮತದಾನದ ವೇಳೆ ಸಣ್ಣ-ಪುಟ್ಟ ಗಲಾಟೆ, ಗದ್ದಲ ನಡುವೆ ಶೇ.67.54 ಮತದಾನವಾಗಿತ್ತು.

41,050 ಮತದಾರರು ಮತದಾನ ಮಾಡಿದರು. 15 ನಿರ್ದೇಶಕರ ಸ್ಥಾನಕ್ಕೆ ಒಟ್ಟು 32 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಸಂಘದ 97,841 ಸದಸ್ಯರ ಪೈಕಿ 60,046 ಜನ ಮತದಾನಕ್ಕೆ ಅರ್ಹರಾಗಿದ್ದರು. 122 ಮತಗಟ್ಟೆ ಕೇಂದ್ರ ಸ್ಥಾಪಿಸಲಾಗಿತ್ತು. ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಿತು. ರಾತ್ರಿ 3 ಗಂಟೆವರೆಗೂ ಮತ ಎಣಿಕೆ ನಡೆದಿದ್ದು, ಕುತೂಹಲ ಕೆರಳಿಸಿತ್ತು.

.......

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net