

ವಿದ್ಯುತ್ ಶಾರ್ಟ್ ಸರ್ಕ್ಯೂಟ್
ಹೊತ್ತಿ ಉರಿದ ಬೇಕರಿ ಅಂಗಡಿ
ವಿಜುವಾಣಿ ಸುದ್ದಿಜಾಲ ಚಿಕ್ಕೋಡಿ
ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿ ಗೇಟನಲ್ಲಿ ಬೇಕರಿಯಲ್ಲಿ ಸಂಭವಿಸಿದ ಶಾರ್ಟ ಸರ್ಕ್ಯೂಟನಿಂದಾಗಿ ಬೇಕರಿ ಸುಟ್ಟು ಕರಕಲಾದ ಘಟನೆ ಇಂದು(ಸೋಮವಾರ) ಮಧ್ಯಾಹ್ನ ಸಂಭವಿಸಿದೆ.
ಹಾಸನ ಮೂಲದ ಉಮೇಶ ಎಂಬುವ ವ್ಯಕ್ತಿಗೆ ಸೇರಿದ ಬೇಕರಿಯಲ್ಲಿ ಮಧ್ಯಾಹ್ನ ಖಾದ್ಯ ತಯಾರಿಸುವ ಸಂದರ್ಭದಲ್ಲಿ ಉಂಟಾದ ಶಾರ್ಟ ಸರ್ಕ್ಯೂಟನಿಂದ ಯಂತ್ರೋಪಕರಣ ಹಾಗೂ ಬೇಕರಿಯಲ್ಲಿ ತಯಾರಿಸಲಾದ ವಿವಿಧ ತಿಂಡಿ ತಿನಿಸುಗಳು ಸುಟ್ಟು ಭಸ್ಮವಾಗಿ ಸುಮಾರು ೧೦ ಲಕ್ಷಕ್ಕೂ ಅಧಿಕ ಮೊತ್ತದ ನಷ್ಟವಾಗಿದೆ. ಬೆಂಕಿಮುನ್ಸೂಚನೆ ದೊರೆಯುತ್ತಿದ್ದಂತೆ ಎಲ್ಲ ಕಾರ್ಮಿಕರನ್ನು ಮಾಲಿಕ ಉಮೇಶ ಸುರಕ್ಷಿತವಾಗಿ ಹೊರಕ್ಕೆ ಕರೆತಂದಿದ್ದು ಆಗಬಹುದಾಗಿದ್ದ ಅನಾಹುತ ತಪ್ಪಿದಂತಾಗಿದ್ದು, ಸ್ಥಳಕ್ಕೆ ಆಗ್ನಿಶಾಮಕ ತಂಡ ಬಂದು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿತು. ಸ್ಥಳಕ್ಕೆ ಪೊಲೀಸರು ಆಗಮೀಸಿ ಘಟನೆ ಮಾಹಿತಿ ಪಡೆದರು. ಘಟನೆಗೆ ಸುರಕ್ಷತಾ ಕ್ರಮವಹಿಸದಿರುವದೇ ಮುಖ್ಯ ಕಾರಣವೆನ್ನಲಾಗಿದೆ.