

ಚಿತ್ರದುರ್ಗ: ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಚಿತ್ರದುರ್ಗದ ಹಲವು ಪ್ರದೇಶಗಳಲ್ಲಿ ಆ.10ರ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ವಿದ್ಯುತ್ ಸರಬಾಜಿನಲ್ಲಿ ವ್ಯತ್ಯಯವಾಗಲಿದೆ. ಆರ್‌ಟಿಒ ಕಚೇರಿ, ವಾಸವಿ ಮಹಲ್, ಎಸ್‌ಪಿ ಕಚೇರಿ ಸುತ್ತಮುತ್ತ, ಲಕ್ಷ್ಮೀಬಜಾರ್, ಬಿ.ಡಿ.ರಸ್ತೆ, ದೊಡ್ಡಪೇಟೆ, ಚಿಕ್ಕಪೇಟೆ, ಎಸ್‌ಆರ್‌ಇ ಲೇಔಟ್, ಕೆಳಗೋಟೆ, ಮುನ್ಸಿಪಲ್ ಕಾಲನಿ, ಬಾರ್‌ಲೈನ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ನಿಲುಗಡೆ ಆಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.