ವಿದ್ಯುತ್ ಬಿಲ್ ಬಾಕಿ: ತಾಲೂಕು ಕಚೇರಿ ಸಂಪರ್ಕ ಕಟ್

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಬೆಸ್ಕಾಂ ಸಿಬ್ಬಂದಿಗಳು ತಾಲೂಕು ಕಚೇರಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಪ್ರಸಂಗ ಗುರುವಾರ ನಡೆದಿದೆ.

ನಗರಲ್ಲಿನ ಮಿನಿ ವಿಧಾನಸೌಧಕ್ಕೆ ಸಂಬಂಧಿಸಿದಂತೆ ಕೆಲ ತಿಂಗಳುಗಳಿಂದ 1.39 ಲಕ್ಷ ರೂ ವಿದ್ಯುತ್ ಬಿಲ್ ಪಾವತಿಯಾಗಿದೆ ಬಾಕಿ ಉಳಿದಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ಇದರಿಂದ ಸುಮಾರು ಒಂದೂವರೆ ಗಂಟೆಗಳ ಕಾಲ ಕಚೇರಿಯ ಬಹುತೇಕ ಎಲ್ಲ ವಿಭಾಗಗಳಲ್ಲಿ ಕಂಪ್ಯೂಟರ್ ಕೆಲಸ ಮಾಡದೆ ಕೆಲಸ ಕಾರ್ಯ ಸಂಪೂರ್ಣ ಸ್ಥಗಿತಗೊಂಡು ಸಾರ್ವಜನಿಕರು ಕೂಡ ಪರದಾಡುವಂತಾಯಿತು.

ವಿಷಯ ತಿಳಿದು ಸ್ಥಳಕ್ಕೆ ಬಂದ ತಹಸೀಲ್ದಾರ್ ಶೋಭಿತಾ ಮನವಿ ಮಾಡಿಕೊಂಡ ನಂತರ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು. ವಿದ್ಯುತ್ ಬಿಲ್ ಪಾವತಿಗೂ ತಹಸೀಲ್ದಾರ್ ಕ್ರಮ ಕೈಗೊಂಡರು. ಅನುದಾನ ವಿಳಂಭ ಇದಕ್ಕೆ ಕಾರಣವಾಯಿತು ಎಂದು ತಹಸೀಲ್ದಾರ್ ಪ್ರತಿಕ್ರಿಯಿಸಿದ್ದಾರೆ.

ಕಾರ್ಯಾಚರಣೆ ಮುಂದುವರಿಸಿದರುವ ಬೆಸ್ಕಾಂ ಸಿಬ್ಬಂದಿಗಳು ಹಳೇ ಡಿಸಿ ಕಚೇರಿ ಆಚರಣದಲ್ಲಿನ ವಿವಿಧ ಇಲಾಖೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಆರ್ಥಿಕ ವರ್ಷದ ಕಡೇ ತಿಂಗಳಾದ್ದರಿಂದ ವಿದ್ಯುತ್ ಕಡಿತ ಇಲಾಖೆಗಳಲ್ಲಿ ಅಧಿಕಾರಿ ಸಿಬ್ಬಂದಿ ವರ್ಗವನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net