ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇಲಾಖೆಯಲ್ಲಿ 48,000 ಕೋಟಿ ನಷ್ಟ; ಎಚ್. ಡಿ.ರೇವಣ್ಣ

ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇಲಾಖೆಯಲ್ಲಿ 48,000 ಕೋಟಿ ನಷ್ಟ; ಎಚ್. ಡಿ.ರೇವಣ್ಣ
Published on

ಹೊಳೆನರಸೀಪುರ: ಸರ್ಕಾರದ ನಿರ್ಲಕ್ಷ ಧೋರಣೆಯಿಂದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇಲಾಖೆ 48000 ಕೋಟಿ ನಷ್ಟ ಅನುಭವಿಸುತ್ತಿದೆ ಎಂದು ಶಾಸಕ ಎಚ್ ಡಿ ರೇವಣ್ಣ ದೂರಿದ್ದಾರೆ.

ತಾಲೂಕಿನ ಕಳ್ಳಿ ಕೊಪ್ಪಲು ಗಂಗೂರು ಸಮೀಪ ಇರುವ ವಿವಿ ಕೇಂದ್ರದಲ್ಲಿ 66/11 ಕೆ ವಿ ಉಪ ವಿದ್ಯುತ್ ವಿತರಣಾ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಸರ್ಕಾರ ಇಂಧನ ಇಲಾಖೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸದೆ ಸೊರಗುತ್ತಿದೆ . ಆದಾಯ ತಂದುಕೊಡುತ್ತಿದ್ದ ಇಲಾಖೆ ಇಂದು ನಷ್ಟದಲ್ಲಿದೆ ಇದಕ್ಕೆ ನೇರಹೂಣೆ ಇಂದಿನ ಸರ್ಕಾರ ಎಂದು ಆರೋಪಿಸಿದರು. ನಾನು ಇಂಧನ ಇಲಾಖೆ ಮಂತ್ರಿ ಆಗಿದ್ದ ಅವಧಿಯಲ್ಲಿ 486 ವಿವಿಧ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಇಂಧನ ಇಲಾಖೆಯಲ್ಲಿ ಇತಿಹಾಸ ಸೃಷ್ಟಿ ಮಾಡಿದ್ದೆ, ನನ್ನ ಅವಧಿಯಲ್ಲಿ 500 ಕೋಟಿ ಎಷ್ಟು ಠೇವಣಿ ಹಣವನ್ನು ಮುಂಗಡವಾಗಿ ಇರಿಸಲಾಗಿತ್ತು ಆದರೆ ಈಗ ಇಂಧನ ಇಲಾಖೆ ನಷ್ಟದಲ್ಲಿದೆ ಈಗಿನ ಸರ್ಕಾರ ಇಲಾಖೆಯನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿಲ್ಲ ಇದೇ ರೀತಿ ಮುಂದುವರೆದರೆ ಖಾಸಗಿಕರಣ ಆಗುವ ಸಾಧ್ಯತೆಯು ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚುನಾವಣಾ ಪ್ರಚಾರಕ್ಕಾಗಿ ರಾಷ್ಟ್ರೀಯ ಪಕ್ಷಗಳು ವಿವಿಧ ಉಚಿತ ಘೋಷಣೆಗಳನ್ನು ಮಾಡಿದ್ದಾರೆ ಇಷ್ಟೊಂದು ನಷ್ಟದಲ್ಲಿರುವ ಇಲಾಖೆಯಿಂದ ಉಚಿತ ವಿದ್ಯುತ್ ಹೇಗೆ ನೀಡುತ್ತಾರೆ ಎಂಬುದನ್ನೂ ಅವರೇ ತಿಳಿಸಬೇಕಿದೆ ಎಂದು ವ್ಯಂಗ್ಯವಾಡಿದರು. ಸರ್ಕಾರ ಹತ್ತಾರು ಬಾರಿ ವಿದ್ಯುತ್ ದರ ಏರಿಸಿದರು ಕೂಡ ಇಷ್ಟು ಪ್ರಮಾಣದಲ್ಲಿ ನಷ್ಟ ತೋರಿಸುತಿರುವುದು ಹಾಸ್ಯಾಸ್ಪದವಾಗಿದೆ ಎಂದರು. ರಾಜ್ಯ ಹಾಗೂ ಜಿಲ್ಲೆ ಮಟ್ಟದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಬೇಕು ಆ ನಿಟ್ಟಿನಲ್ಲಿ ಸರ್ಕಾರ ಅಧಿಕಾರಿಗಳಿಗೆ ಬಲ ತುಂಬಿಸಬೇಕು ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ಟೆಂಡರ್ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಕೆಲಸ ಕಾರ್ಯಗಳನ್ನು ತುರ್ತಾಗಿ ನಿರ್ವಹಿಸುವ ಅಗತ್ಯವಿದೆ ಎಂದು ಹೇಳಿದರು .ರೈತರಿಗೆ ತೊಂದರೆ ಆಗದ ರೀತಿಯಲ್ಲಿ ವಿದ್ಯುತ್ ಸೌಲಭ್ಯವನ್ನು ಒದಗಿಸಬೇಕು ಎಂದು ಒತ್ತಾಯಿಸಿದರು. ಇದೇ ರೀತಿ

ವಿವಿ ಕೇಂದ್ರಗಳನ್ನು ಪಡುವಲಹಿಪ್ಪೆ ,ತಟ್ಟೆಕೆರೆ, ದುದ್ದ ,ಬರಗೂರು ಹ್ಯಾಂಡ್ ಪೋಸ್ಟ್ , ಮತ್ತುಕುಂಬೆನಹಳ್ಳಿ ಸ್ಥಳಗಳಲ್ಲಿ ಉಪ ವಿದ್ಯುತ್ ವಿತರಣಾ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಧೀಕ್ಷಕ ಅಭಿಯಂತರ ಮಹೇಶ್ ಕಾರ್ಯ ಪಾಲಕ ಅಭಿಯಂತರ ಗೋಕುಲ ಮೋಹನ್ ಕುಮಾರ್ ಸಿದ್ದೇಶ್ ಸವಿತಾ ಅನಿತಾ ಹಾಗೂ ದೊಡ್ಡ ಬ್ಯಾಗುತವಳ್ಳಿ ಗ್ರಾಪಂ ಅಧ್ಯಕ್ಷ ಕಿರಣ್ ಕುಮಾರ್ ಪಡುವಲ ಹಿಪ್ಪೆ ಗ್ರಾಪಂ ಅಧ್ಯಕ್ಷರಾದ ರಾಧಾ ಸಂಕನಹಳ್ಳಿ ಗ್ರಾಮ ಅಧ್ಯಕ್ಷ ಮಣಿ ಲೋಕೋಪಯೋಗಿ ಇಲಾಖೆ ಅಭಿಯಂತರ ಹೇಮಂತ್ ಗುತ್ತಿಗೆದಾರ ಹರೀಶ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net