ಕೊಳ್ಳೇಗಾಲ: ತಾಲೂಕಿನ ಮಧುವನಹಳ್ಳಿ ಗ್ರಾಮದ ಜಮೀನೊಂದ ರಲ್ಲಿ ವಿದ್ಯುತ್ ಪ್ರವಹಿಸಿ ಮಹಿಳಾ ಕೂಲಿ ಕಾರ್ಮಿಕ ಳ್ಳೊಬ್ಬಳು ಸೋಮವಾರ ಮೃತಪಟ್ಟಿದ್ದಾಳೆ.
ಗ್ರಾಮದ ಮಾದೇಶ್ ಎಂಬುವರ ಪತ್ನಿ ಪವಿತ್ರ (35) ಮೃತ ಮಟ್ಟ ಮಹಿಳೆ. ಈಕೆ ಕೂಲಿ ಕಾರ್ಮಿಕರಾಗಿದ್ದು ಗ್ರಾಮದ ಮಹೇಶ್ ಎಂಬುವರ ಜಮೀನಿನ ಕಬ್ಬು ಕಟಾವಿನ ಕೆಲಸಕ್ಕೆ ತೆರಳಿದ್ದಳು. ಈ ವೇಳೆ ಪಕ್ಕದ ದಲ್ಲಿದ್ದ ರಾಚಪ್ಪಾಜಿ ಎಂಬುವರ ಜೋಳದ ಜಮೀನಿಗೆ ಮೂತ್ರ ವಿಸರ್ಜನೆ ಮಾಡಲು ಹೋದಾಗ ವಿದ್ಯುತ್ ಪ್ರವಹಿಸಿದ ಪರಿಣಾಮ ಕೂಗಿಕೊಂಡಿದ್ದಾಳೆ. ಬಳಿಕ, ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಗೆ ಪವಿತ್ರಳನ್ನು ಕರೆದೊಯ್ಯಲಾಗಿದ್ದು. ವ್ಯೆದ್ಯರು ಪವಿತ್ರ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಸಂಬಂಧ ಮೃತಳ ಪತಿ ಮಾದೇಶ್ ರಾಚಪ್ಪಾಜಿ ಎಂಬುವರು ತಮ್ಮ ಜೋಳದ ಜಮೀನಿಗೆ ವಿದ್ಯುತ್ ಕಂಬದಿಂದ ಅಕ್ರಮವಾಗಿ ಪಡೆದಿದ್ದು ನನ್ನ ಪತ್ನಿ ವಿದ್ಯುತ್ ಶಾಕ್ ಗೆ ಒಳಪಟ್ಟು ಮೃತಪಟ್ಟಿದ್ದಾಳೆ. ಈ ಹಿನ್ನಲೆ ಕಾನೂನು ರೀತಿ ಕ್ರಮವಹಿಸಬೇಕೆಂದು ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಚಾಮರಾಜನಗರ ವೈದ್ಯಕೀಯ ಆಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾ ರರಿಗೆ ಒಪ್ಪಿಸಲಾಗಿದೆ.
ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದ ಆರೋಪಿ ರಾಚಪ್ಪಾಜಿ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.