

ಚಾಮರಾಜನಗರ: ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ಇದ್ದರೆ ತಕ್ಷಣವೇ ಬಗೆಹರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸೆಸ್ಕ್ ಕಾರ್ಯಪಾಲಕ ಅಭಿಯಂತರರಾದ ಪ್ರದೀಪ್ ಹೇಳಿದರು.
ನಗರದ ಸೆಸ್ಕ್ ಉಪವಿಭಾಗ ಹಾಗೂ ಹರದನಹಳ್ಳಿ ಉಪ ವಿಭಾಗದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಅಧ್ಯಕ್ಷ ತೆ ವಹಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಜೋತಿರುವ ವಿದ್ಯುತ್ ತಂತಿ, ಶಿಥಿಲಕಂಬಗಳ ದುರಸ್ತಿ ಸೇರಿದಂತೆ ಯಾವುದೇ ವಿದ್ಯುತ್ ಸಮಸ್ಯೆಗಳು ಇದ್ದರೂ ತಕ್ಷಣ ರೈತರು ,ಗ್ರಾಹಕರು ತಮ್ಮ ಗಮನಕ್ಕೆ ತಕ್ಷಣವೇ ಪರಿಹರಿಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಚಾಮರಾಜನಗರ ಉಪವಿಭಾಗದಲ್ಲಿ 5 ದೂರು, ಹರದನಹಳ್ಳಿಯಲ್ಲಿ 7 ದೂರುಗಳು ದಾಖಲಾಯಿತು. ಸಮಸ್ಯೆ ಆಲಿಸಿದ ಪ್ರದೀಪ್ ಮಾತನಾಡಿ, ವಿದ್ಯುತ್ ಸಮಸ್ಯೆ ಕುರಿತು ಗ್ರಾಹಕರು ,ರೈತರಿಂದ ಯಾವುದೇ ದೂರು ಬಂದರೂ ತಕ್ಷಣ ವೇ ನಿಗಮ ಅಧಿಕಾರಿ ಸ್ಪಂದಿಸಿ ಕೆಲಸ ಮಾಡಬೇಕು ಈಗ ಬಂದಿರುವ ದೂರಿಗಳಿಗೆ ಆದ್ಯತೆ ಮೇರೆಗೆ ಪರಿಹಾರ ಕಲ್ಪಿಸಿ ಗೃಹ ವಿದ್ಯುತ್ ಯೋಜನೆ ಸಲ್ಲಿಸಿರುವ ಅರ್ಜಿಗಳನ್ನು ತಕ್ಷಣದಿಂದಲ್ಲೇ ಜಾರಿಗೆ ಬರುವಂರೆ ಕ್ರಮವಹಿಸುವಂತೆ ಸೂಚಿಸಿದರು.
ದೊಡ್ಡಮೋಳೆ ಗ್ರಾಮದ ನಾರಾಯಣ್ ಅವರು ತಮ್ಮ ಜಮೀನಿನಲ್ಲಿ ಆಯ್ದು ಹೋಗಿರುವ ವಿದ್ಯುತ್ ಕಂಬಗಳು ಶಿಥಿಲಗೊಂಡಿದ್ದು ಇದನ್ನುತೆರವುಗೊಳಿಸುವಂತೆ ದೂರ ಬಂದಿದೆ ಇದ್ಕ್ಕೆ ಅಧಿಕಾರಿಗಳ ಕ್ರಮಕೈಗೊಳ್ಳಬೇಕು.ಗಂಗಾ ಕಲ್ಯಾಣ ಯೋಜನೆ ಯಡಿ ಕೊಳವೆ ಬಾಯಿ ಕೊರೆಸಿದ್ದು ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ತಿಳಿಸಿದ್ದಾರೆ.
ಬೋರ್ವೆಲ್ ತೆಗೆಸಿದೆ, ಆದರೆ ಸರ್ವಿಸ್ ದೊರೆತಿಲ್ಲ ಇದರಿಂದ ವ್ಯವಸಾಯ ಮಾಡಲು ತೊಂದರೆ ಉಂಟಾಗಿದೆ, ಈ ಸಂಬಂಧ ಕೂಡಲೇ ಸರ್ವಿಸ್ ಕೊಡಿಸಿ ಕೊಡಬೇಕೆಂದು ಎಚ್ ಡಿ ಫಾರೆಸ್ಟ್ ನ ರೈತ ನಾಗೇಂದ್ರ ದೂರು ನೀಡಿದರು. ಅದೇ ರೀತಿ ದೊಡ್ಡ ಮೂಳೆ ಗ್ರಾಮದ ನಾರಾಯಣ ಎಂಬುವರು ತಮ್ಮ ಜಮೀನಿನಲ್ಲಿ ಸಿಮೆಂಟ್ ಕಂಬಗಳನ್ನು ಅಳವಡಿಸಲಾಗಿದ್ದು ಅವುಗಳು ಇತ್ತೀಚೆಗೆ ಬಿದ್ದ ಮಳೆಯಿಂದ ವಾಲಿಕೊಂಡು ತೆಂಗಿನ ಮರಗಳಿಗೆ ತಾಕುತ್ತಿದೆ. ವಿದ್ಯುತ್ ತಂತಿಗಳಿಂದ ಅನಾಹುತ ಆಗುವ ಸಂಭವವಿದೆ ಆದ್ದರಿಂದ ಕೂಡಲೇ ವಾಲಿರುವ ಕಂಬಗಳನ್ನು ದುರಸ್ತಿ ಪಡಿಸಬೇಕೆಂದು ತಿಳಿಸಿದರು.
ಸಿದ್ದಯ್ಯನಪುರ ಗ್ರಾಮದ ಲಕ್ಷ್ಮಮ್ಮ ಎಂಬುವರು ತಮಗೆ ಸೇರಿದ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ಎರಡು ಎಕರೆಯಲ್ಲಿದ್ದ ಕಬ್ಬು ಫಸಲು ಹಾನಿಯಾಗಿದೆ, ಈ ಸಮಯದ ತಮಗೆ ಸೂಕ್ತ ಪರಿಹಾರ ಕಲ್ಪಿಸಿ ಕೊಡಬೇಕೆಂದು ಮನವಿ ಮಾಡಿದರು, ಇದಕ್ಕೆ ಪ್ರತಿಕ್ರಿಸಿದ ಕಾರ್ಯನಿರ್ವಾಹಕ ಇಂಜಿನಿಯರ್ ಘಟನೆ ನಡೆದ 24 ಗಂಟೆ ಒಳಗೆ ಕಚೇರಿಗೆ ಮಾಹಿತಿ ನೀಡಬೇಕು, ಹಾಗೂ ಅರ್ಜಿ ಸಲ್ಲಿಸಬೇಕಾಗಿತ್ತು, ಈಗ ತಡವಾಗಿ ತಿಳಿಸಿರುವುದರಿಂದ ಪರಿಹಾರ ಕೊಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಸಭೆಯಲ್ಲಿ ಎಇಇಗಳಾದ ಮಹೇಶ್, ದ್ರುಪದ, ಜೆಇ ಗಳಾದ ಮಹದೇವಸ್ವಾಮಿ, ಮಂಜುನಾಥ್, ಚಂದ್ರನಾಯಕ, ಸತೀಶ್, ನವೀನ್, ರಿತೇಶ್, ಕಚೇರಿ ಸಹಾಯಕ ಇಂಜಿನಿಯರ್ ಪ್ರದೀಪ್ ಕುಮಾರ್, ಕಂದಾಯ ಹಿರಿಯ ಸಹಾಯಕ ಮಹಾದೇವಸ್ವಾಮಿ, ಎಇಟಿ ನಾಗೇಂದ್ರ, ಎಓ ಮಂಗಳಾಂಬ ಹಾಜರಿದ್ದರು