ವಿದ್ಯುತ್ ಪರಿವರ್ತಕ ಅಳವಡಿಸುವಂತೆ ಆಗ್ರಹ

Screenshot_20230204_142237
Published on

ಹೊಳೆನರಸೀಪುರ: ರೈತರು ಬೆಳೆದ ಬೆಳೆಗೆ ನೀರು ಸರಬರಾಜು ಮಾಡಲು ಬೇಕಾಗಿರುವ ವಿದ್ಯುತ್ ಪರಿವರ್ತಕವನ್ನು ಸಕಾಲಕ್ಕೆ ಅಳವಡಿಸುವಲ್ಲಿ ನಿರ್ಲಕ್ಷೃ ವಹಿಸಿದ ಅಧಿಕಾರಿಗಳ ವಿರುದ್ಧ್ದ ತಾಲೂಕು ಕೆರೆಗೋಡು ಗ್ರಾಮದ ರೈತರು ಇತ್ತೀಚೆಗೆ ಪ್ರತಿಭಟನೆ ನಡೆಸಿದರು.

ತಾಲೂಕಿನ ಕೆರಗೋಡು ಗ್ರಾಮದ ಜವರೇಗೌಡ, ರಾಜೇಗೌಡ, ಚಂದ್ರಶೇಖರ್ ಸೇರಿದಂತೆ ಸುಮಾರು 15 ರೈತರು ಕಳೆದ ತಿಂಗಳು ತಮ್ಮ ಭೂಮಿಗೆ ನೀರು ಹರಿಸುವ ಸಲುವಾಗಿ ಸೆಸ್ಕ್‌ಗೆ ಹಣ ಸಂದಾಯ ಮಾಡಿ ವಿದ್ಯುತ್ ಪರಿವರ್ತಕವನ್ನು ಗ್ರಾಮದಲ್ಲಿ ಅಳ ವಡಿಸಿದ್ದರು. ಆದರೆ ಪರಿವರ್ತಕ ಕಳೆದ ವಾರ ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಇದರಿಂದ ರೈತರು ಸಂಕಟದಲ್ಲಿದ್ದಾರೆ. ಬೆಳೆಗೆ ನೀರು ಹರಿಸಲು ವಿದ್ಯುತ್ ಸೌಲಭ್ಯ ಒದಗಿಸಲು ತಡ ಮಾಡಿದರೆ, ಕಷ್ಟಪಟ್ಟು ನಾಟಿ ಮಾಡಿದ ಬೆಳೆಗೆ ನೀರು ದೊರಕದೆ ಹಾಳಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೆಸ್ಕ್‌ಗೆ ಮತ್ತೆ ಹಣ ನೀಡಿ ಮತ್ತೊಂದು ಪರಿವರ್ತಕ ನೀಡುವಂತೆ ಮನವಿ ಮಾಡಿದ್ದರೂ ಅಧಿಕಾರಿಗಳು ಪರಿವರ್ತಕ ನೀಡದೆ ಸತಾಯಿಸುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ಮನವಿ ಮಾಡಿದರೂ ಸಂಬಂಧಪಟ್ಟವರು ಸ್ಪಂದಿಸುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net