

ಕಂಪ್ಲಿ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಉಪ ವಿಭಾಗದ ಪ್ರಾಥಮಿಕ ಸಮಿತಿಯ ಏಳು ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆಯಿತು.
14 ಅಭ್ಯರ್ಥಿಗಳು ಕಣದಲ್ಲಿದ್ದು, 65 ಮತದಾರರು ಮತ ಚಲಾಯಿಸಿದರು. ಡಿ.ಶ್ರೀನಿವಾಸಪ್ಪ 42, ಎಂ.ದೊಡ್ಡಬಸಪ್ಪ, ಬಿ.ಹೊನ್ನೂರಸ್ವಾಮಿ ತಲಾ 41, ಎಚ್.ರಾಮಾಂಜನೇಯಲು, ಎನ್.ಉಮೇಶ ತಲಾ 40, ಕೆ.ನಾಗರಾಜ, ಎನ್.ವೆಂಕಟಾಚಲಂ ತಲಾ 37ಮತಗಳನ್ನು ಗಳಿಸಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ವಕೀಲ ಸಿ.ರುದ್ರಪ್ಪ ತಿಳಿಸಿದರು.
ಸಹಾಯಕ ಚುನಾವಣಾಧಿಕಾರಿ ಎನ್.ಮಾರುತಿ, ಜೆಸ್ಕಾಂ ಎಇಇ ಜಿ.ಎನ್.ಮಲ್ಲಿಕಾರ್ಜುನಗೌಡ, ಅಧಿಕಾರಿಗಳಾದ ವಿನೋದ್ ಬ್ಯಾಲಾಳ್, ಶಮಿಉಲ್ಲಾ, ಭೀಮೇಶ್, ಮಹಾಂತೇಶ ತುಂಬಳದ, ವಿಜಯಕುಮಾರ್ ಇತರರಿದ್ದರು.