ವಿದ್ಯುತ್ ತಗುಲಿ ಯುವಕ ಸಾವು

current shock
Published on

ಕಲಬುರಗಿ: ಮನೆಗೆ ನೀರು ತೆಗೆದುಕೊಳ್ಳಲು ಕೊಳವೆ ಬಾವಿಯ ಮೋಟಾರ್ ಚಾಲು ಮಾಡಿ, ವೈರ್ ತೆಗೆಯುವಾಗ ವಿದ್ಯುತ್ ತಗುಲಿ ಯುವಕ ಮೃತಪಟ್ಟ ಘಟನೆ ಶಿವಾಜಿ ನಗರದಲ್ಲಿ ನಡೆದಿದೆ. ರಾಹುಲ್ ಆಲೂರೆ (೨೨) ಮೃತ ಯುವಕ. ಮಧ್ಯಾಹ್ನ ೧ಕ್ಕೆ ಮನೆಗೆ ನೀರು ತುಂಬುವಾಗ ವಿದ್ಯುತ್ ವೈರ್ ತೆಗೆಯುವ ವೇಳೆ ಕರೆಂಟ್ ತಗುಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಖಲಿಸುವ ಮುನ್ನವೇ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಆಕಸ್ಮಿಕವಾಗಿ ಘಟನೆ ನಡೆದಿದೆ ಎಂದು ಮೃತನ ಸಹೋದರ ಸುನೀಲ ಆಲೂರೆ ನೀಡಿದ ದೂರಿನಂತೆ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net