ವಿದ್ಯುತ್​ ತಗುಲಿ ಮಹಿಳೆ ಸಾವು

11Mamadapur1 Roopa karennavar
Published on

ಮಮದಾಪುರ: ಗೋಕಾಕ ತಾಲೂಕಿನ ಕೊಳವಿ ಗ್ರಾಮದ ರೂಪಾ ಕರೆಪ್ಪ ಕರೆನ್ನವರ (29) ವಿದ್ಯುತ್​ ತಗುಲಿ ಮೃತಪಟ್ಟ ಟನೆ ಬುಧವಾರ ನಡೆದಿದೆ.

ಬೆಳಗ್ಗೆ 9 ಗಂಟೆಗೆ ಬಟ್ಟೆ ತೊಳೆದು ಮನೆಯ ಹಿತ್ತಲಿನಲ್ಲಿ ಅಳವಡಿಸಿದ್ದ ಕಬ್ಬಿಣದ ರಾಡ್​ಗೆ ಬಟ್ಟೆಗಳನ್ನು ಹಾಕುತ್ತಿದ್ದಾಗ ರಾಡ್​ಗೆ ತಾಗಿದ ವಿದ್ಯುತ್​ ಮಹಿಳೆಗೂ ಶಾಕ್​ ಹೊಡೆದಿದೆ. ತಣ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಮೃತರಿಗೆ ಪತಿ, ಪುತ್ರ, ಪುತ್ರಿ ಇದ್ದಾರೆ. ಗೋಕಾಕ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net