ಚಾಮರಾಜನಗರ : ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ಮನೆಯಲ್ಲಿ ವಿದ್ಯುತ್ ತಗುಲಿ ಬಾಲಕಿ ಮೃತಪಟ್ಟಿದ್ದಾಳೆ. ಗ್ರಾಮದ ಮಹದೇವಪ್ಪ ಅವರ ಮೊಮ್ಮಗಳು ವಿದ್ಯಾಶ್ರೀ(11) ಮೃತ.
ಮಹದೇವಪ್ಪ ಅವರು ತಮ್ಮ ಮಗಳನ್ನು ಕುಮಚಹಳ್ಳಿ ಗ್ರಾಮಕ್ಕೆ ಮದುವೆ ಮಾಡಿಕೊಟ್ಟಿದ್ದರು. ಮೃತ ಬಾಲಕಿ ತಾತನ ಮನೆಯಲ್ಲಿ ಇದ್ದುಕೊಂಡು ವ್ಯಾಸಂಗ ಮಾಡುತ್ತಿದ್ದಳು.
ಮನೆಗೆ ನೀರು ಸರಬರಾಜು ಮಾಡಲು ಸಂಪಿಗೆ ಅಳವಡಿಸಿದ್ದ ಮೋಟಾರು ನಿಲ್ಲಿಸಲು ಸ್ವಿಚ್ ಮುಟ್ಟಿದಾಗ ವಿದ್ಯುತ್ ತಗುಲಿ ಸ್ಥಳದಲ್ಲೇ ಸಾವಿಗೀಡಾದಳು. ಕಳೇಬರವನ್ನು ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಿ, ಅಂತ್ಯಕ್ರಿಯೆ ಮಾಡಲಾಯಿತು. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.