ವಿದ್ಯುತ್ ತಗುಲಿ ಬಾಲಕ ಸಾವು

Crime Logo
Published on

ಕಲಬುರಗಿ: ನಗರದ ಬಿದ್ದಾಪುರ ಕಾಲನಿಯ ಜಿಡಿಎ ಲೇಔಟ್‌ನಲ್ಲಿ ಮನೆಗೆ ನೀರಿನ ಮೋಟಾರ್ ಹಚ್ಚುವ ವೇಳೆ ವಿದ್ಯುತ್ ತಗುಲಿ ಬಾಲಕ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಭೀಮಾಶಂಕರ ಹೊಸಮನಿ (೧೪) ಮೃತ ಬಾಲಕ. ಶನಿವಾರ ವಾರಕ್ಕೆ ಒಮ್ಮೆ ಬರುವ ನೀರು ಬಂದ ನಿಮಿತ್ತ ಮನೆಯಿಂದ ದೂರ ಇರುವ ನಳಕ್ಕೆ ಮೋಟಾರ್ ಹಚ್ಚಲು ಹೋಗಿದ್ದಾನೆ. ಮನೆ ಎದುರು ಎಲ್ ಆ್ಯಂಡ್ ಟಿಯಿಂದ ತಗ್ಗು ತೋಡಲಾಗಿದ್ದು, ಮಳೆಯ ನೀರು ನಿಂತ್ತಿದೆ. ಮೋಟಾರ್ ಹಚ್ಚಿ ವಾಪಸ್ ಬರುವಾಗ ಕಟ್ ಆಗಿದ್ದ ವೈರ್‌ನಿಂದ ನೀರಿಗೆ ವಿದ್ಯುತ್ ಸಂಚರಿಸಿದ್ದು, ನೀರಿನಲ್ಲಿ ಬಾಲಕ ಕಾಲಿಟ್ಟಾಗ ವಿದ್ಯುತ್ ತಗುಲಿ ಮೃತಪಟ್ಟಿದ್ದಾನೆ ಎಂದು ಬಾಲಕನ ತಾಯಿ ಅಶೋಕ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net