

ಕೊಳ್ಳೇಗಾಲ: ತಾಲೂಕಿನ ಕೊತ್ತನೂರು ಸಮೀಪ ಚಪ್ಪದಹಳ್ಳ ಅರಣ್ಯಕ್ಕೆ ಹೊಂದಿಕೊಂಡಂತಿರುವ ಜಮೀನಿನ ಬಳಿ ಕಾಡಾನೆಯೊಂದು ವಿದ್ಯುತ್ ತಂತಿ ತಗುಲಿ ಮೃತಪಟ್ಟಿದೆ. ಕೊತ್ತನೂರು ಗ್ರಾಮದ ನಿವಾಸಿ ಖ್ಯಾತಯ್ಯ ಎಂಬವರ ಜಮೀನಿನ ಬಳಿ ಪಂಪ್‌ಸೆಟ್‌ಗೆ
ಅಳವಡಿಸಿದ್ದ ವಿದ್ಯುತ್ ತಂತಿ ಸ್ಪರ್ಶದಿಂದ ಗಂಡಾನೆ ಭಾನುವಾರ ಮೃತಪಟ್ಟಿದ್ದು, ಗ್ರಾಮಸ್ಥರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ. ಕಾವೇರಿ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಸುಂದರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಪಶು ವ್ಯೆದ್ಯಾಧಿಕಾರಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ಇಲಾಖೆ ಅಧಿಕಾರಿಗಳು ಮುಂದಿನ ಕ್ರಮವಹಿಸಿದ್ದಾರೆ.