ವಿದ್ಯುತ್ ತಗುಲಿ 4 ಎಮ್ಮೆ ಸಾವು

emme
Published on

ಬಸವಕಲ್ಯಾಣ: ಶಾಹುಸೇನ್ ಬಡಾವಣೆಯಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿ ತಗುಲಿ ನಾಲ್ಕು ಎಮ್ಮೆಗಳು ಅಸುನೀಗಿವೆ. ಕಾಳಿ ಗಲ್ಲಿಯ ರೈತ ಬಾಬುರಾವ ಹತ್ತೆ ತಮ್ಮ ಎಮ್ಮೆಗಳನ್ನು ಮೇಯಿಸಿ ಮನೆಗೆ ಮರಳುವಾಗ ನೆಲಕ್ಕುರುಳಿದ್ದ ಹಳೆಯ ಕಂಬದ ವಿದ್ಯುತ್ ತಂತಿ ತಗುಲಿದ್ದು, ಎಮ್ಮೆಗಳು ಒದ್ದಾಡುತ್ತಿರುವುದನ್ನು ಗಮನಿಸಿದ ಹತ್ತೆ ಪಕ್ಕದ ದಾರಿಗೆ ತೆರಳಿ ಅಪಾಯದಿಂದ ಪಾರಾಗಿದ್ದಾನೆ. ಕಂದಾಯ, ಜೆಸ್ಕಾಂ, ಪೊಲೀಸ್ ಅಧಿಕಾರಿಗಳು ಹಾಗೂ ಪಶು ಆಸ್ಪತ್ರೆ ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net