ಬುಕ್ಕಾಪಟ್ಟಣ: ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿಯ ಹುಣಸೆಕಟ್ಟೆ ಗ್ರಾಮದಲ್ಲಿ ಬೆಳೆ ರಕ್ಷಣೆಗಾಗಿ ಹಾಗೂ ಕಾಡು ಹಂದಿಗಳ ಹಾವಳಿ ತಡೆಗೆ ಹೊಲದಲ್ಲಿ ಎಳೆದಿದ್ದ ವಿದ್ಯುತ್ ತಂತಿ ತಿಳಿದು ಯುವಕನೋರ್ವ ಮೃತಪಟ್ಟಿದ್ದಾನೆ. ಲಿಖಿತ್(26) ಮೃತ. ಈತ ಪಕ್ಕದ ಹೊಲದಲ್ಲಿ ಸುತ್ತಲೂ ಹಾಕಲಾಗಿದ್ದ ವಿದ್ಯುತ್ ತಂತಿಯನ್ನು ರಾತ್ರಿ ವೇಳೆ ತೆರಳುತ್ತಿದ್ದಾಗ ಕಾಣದೆ ತುಳಿದಿದ್ದರಿಂದ ಅವಡ ಸಂಭವಿಸಿದೆ. ಶಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.