ವಿದ್ಯುತ್ ತಂತಿ ತಾಗಿ ವ್ಯಕ್ತಿ ಮೃತ

ವಿದ್ಯುತ್ ತಂತಿ ತಾಗಿ ವ್ಯಕ್ತಿ ಮೃತ
Published on

ಆಲೂರು: ತೋಟದಲ್ಲಿ ಮೆಣಸು ಕೂಯುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ತಂತಿ ತಾಗಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ.

ತಾಲೂಕಿನ ಕುಂದೂರು ಗ್ರಾಮದ ಲೋಕೇಶ್(47) ಎಂಬುವವರೇ ಮೃತಪಟ್ಟ ದುರ್ದೈವಿಯಾಗಿದ್ದು ಎಂದಿನಂತೆ  ಬುಧವಾರ ಬೆಳಗ್ಗೆ ತೋಟದಲ್ಲಿ ಮೆಣಸು ಕೂಯ್ಯುತ್ತಿದ್ದ ಸಂದರ್ಭದಲ್ಲಿ ಸಿಲ್ವರ್ ಏಣಿ ವಿದ್ಯುತ್ ತಾಗಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಆಲೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿಸಿದ್ದಾರೆಂದು ತಿಳಿದು ಬಂದಿದೆ.

ಮೃತ ಲೋಕೇಶ್ ಪತ್ನಿ ,ಮಗಳು ಮಗ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ಇವರು ಕುಂದೂರು ಪ್ರೌಢಶಾಲೆಯ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾಗಿದ್ದು ಇವರ ನಿಧನಕ್ಕೆ ಪ್ರೌಡಶಾಲೆಯಲ್ಲಿ ಮಕ್ಕಳು ಹಾಗೂ ಶಿಕ್ಷಕರು ಸಂತಾಪ ಸೂಚಿಸಿದ್ದಾರೆ.

ಇವರ ಅಕಾಲಿಕ ನಿಧನ ನೋವು ತಂದಿದೆ ಎಂದು ಆಲೂರು-ಸಕಲೇಶಪುರ-ಕಟ್ಟಾಯ ಕ್ಷೇತ್ರದ ಬಿಜೆಪಿ ಹಿರಿಯ ಮುಖಂಡ ಸಿಮೆಂಟ್ ಮಂಜು,ಗೊರೂರು ವೆಂಕಟೇಶ್,ಕಾಂಗ್ರೆಸ್ ಮುಖಂಡ ಹೊನ್ನವಳ್ಳಿ ಗಣೇಶ್, ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ್ ಅಧ್ಯಕ್ಷ ಮಲ್ಲೇಶ್ ಗೌಡ,ಕಸಾಪ ಹಿರಿಯ ಮುಖಂಡ ಜಿ.ಆರ್.ಕೆಂಚೇಗೌಡ, ತಾಲ್ಲೂಕು ಕಸಾಪ ಅಧ್ಯಕ್ಷ ಗೋಪಾಲಕೃಷ್ಣ, ಹಾಗೂ  ಮುಂತಾದವರು ಸಂತಾಪ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net