ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಇಬ್ಬರ ಸಾವು

IMG-20200928-WA0162
Published on

ಯಾದಗಿರಿ: ವಿದ್ಯುತ್ ತಂತಿ ತಗುಲಿ ಇಬ್ಬರು ವ್ಯಕ್ತಿಗಳೊಂದಿಗೆ ಎತ್ತು ಕೂಡ ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ವಡಿಗೇರಾ ತಾಲೂಕಿನ ಬೆಂಡೆಬೆಂಬಳಿ ಸಮೀಪ ಸೋಮವಾರ ನಡೆದಿದೆ.

ಬಸವರಾಜ ಪೂಜಾರಿ (29), ಮೈಲಾಲಿ (30) ಮೃತ ದುರ್ದೈವಿಗಳು. ತಂತಿಯಲ್ಲಿ ಒದ್ದಾಡುತ್ತಿದ್ದ ಎತ್ತನ್ನು ಕಂಡ ಬಸವರಾಜ ಪೂಜಾರಿ ಅದನ್ನು ರಕ್ಷಿಸಲು ಮುಂದಾಗಿದ್ದಾರೆ. ತಕ್ಷಣ ವಿದ್ಯುತ್ ಅವರಿಗೆ ಸ್ಪರ್ಶಿಸಿದೆ. ಇದನ್ನು ಕಂಡ ಗೆಳೆಯ ಮೌಲಾಲಿ ಬಸವರಾಜನ್ನು ಎಳೆಯಲು ಯತ್ನಿಸಿದ್ದಾರೆ. ಆದರೆ ಯಮರೂಪಿ ವಿದ್ಯತ್ ಇಬ್ಬರನ್ನೂ ಬಲಿ ಪಡೆದುಕೊಂಡಿದೆ.

ಮೃತರಿಬ್ಬರು ಬೆಂಡೆಬೆಂಬಳಿ ಗ್ರಾಮದ ರೈತರು ಎಂದು ತಿಳಿದು ಬಂದಿದೆ. ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಗ್ರಾಮೀಣ ಭಾಗದಲ್ಲಿ ವಿದ್ಯುತ್ ತಂತಿಗಳು ನೆಲಕಚ್ಚಿದ್ದು, ಜೆಸ್ಕಾಂನವರ ನಿರ್ಲಕ್ಷೃದಿಂದ ಇಬ್ಬರು ಬಲಿಯಾಗಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ವಡಿಗೇರಾ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net