ವಿದ್ಯುತ್​ ತಂತಿ ತಗುಲಿ ಕಾರ್ಮಿಕನಿಗೆ ಗಾಯ

Published on

ತಿಪಟೂರು: ಪೈಂಟ್​ ಮಾಡುವಾಗ ವಿದ್ಯುತ್​ ತಂತಿ ತಗುಲಿ ಕಾರ್ಮಿಕನೋರ್ವ ತೀವ್ರವಾಗಿ ಗಾಯಗೊಂಡಿದ್ದಾನೆ. ನಗರದ ಕೆ.ಆರ್​.ಬಡಾವಣೆಯ ಮೋಹನ್​ಕುಮಾರ್​ ಎಂಬುವವರ ಮನೆಯಲ್ಲಿ ಶನಿವಾರ ಮಧ್ಯಾಹ್ನ ಪೈಂಟ್​ ಮಾಡುತ್ತಿರುವಾಗ ಪಕ್ಕದಲ್ಲೇ ಹಾದುಹೋಗಿರುವ 110 ಕೆ.ವಿ. ಎಚ್​.ಟಿ. ಲೈನ್​ ತಗುಲಿದ ಪರಿಣಾಮ ಕಾರ್ಮಿಕ ಹಂದನಕೆರೆ ಹೋಬಳಿ ಭೀಮಾನಾಯ್ಕನ ತಾಂಡಾ ನಿವಾಸಿ ಪುಟ್ಟನಾಯ್ಕ (45) ಎಂಬಾತನಿಗೆ ವಿದ್ಯುತ್​ ಸ್ಪರ್ಷವಾಗಿದ್ದು, ದೇಹದ ಬಹುತೇಕ ಕಡೆ ಸುಟ್ಟಗಾಯಗಳಾಗಿವೆ. ಪ್ರಾಥಮಿಕ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕೆಪಿಟಿಸಿಎಲ್​ ನಗರಠಾಣೆಯಲ್ಲಿ ಕಟ್ಟಡ ಮಾಲೀಕರ ವಿರುದ್ಧ ರೂರು ದಾಖಲಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net