ವಿದ್ಯುತ್ ತಂತಿ ತಗುಲಿ ಕಬ್ಬಿನ ಬೆಳೆಗೆ ಹಾನಿ

9kglphoto2........
ಕೊಳ್ಳೇಗಾಲ ತಾಲೂಕಿನ ಹೊಸ ಮಾಲಂಗಿ ಗ್ರಾಮದಲ್ಲಿನ ಕಬ್ಬಿನ ಗದ್ದೆಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರ ಜತೆ ಅಗ್ನಿ ಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದರು.
Published on

ಕೊಳ್ಳೇಗಾಲ: ತಾಲೂಕಿನ ಹೊಸ ಮಾಲಂಗಿ ಗ್ರಾಮದಲ್ಲಿ ಜಮೀನಿನ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ತಗುಲಿ, ಬೆಂಕಿ ಕಾಣಿಸಿಕೊಂಡು ಕಬ್ಬಿನ ಫಸಲಿಗೆ ಹಾನಿಯಾಗಿದೆ.

ಗ್ರಾಮದ ಆನಂದ್ ಎಂಬುವರು 1 ಎಕರೆಯಲ್ಲಿ ಕಬ್ಬು, ನಾಗಮ್ಮ ಅವರ 1 ಎಕರೆ ಹಾಗೂ ಜಯಪ್ಪ ಅವರು 1 ಎಕರೆಯಲ್ಲಿ ಬೆಳೆದಿದ್ದ ಕಬ್ಬಿಗೆ ಬೆಂಕಿ ತಗುಲಿ ಹೊತ್ತಿ ಉರಿದಿದೆ. ಇದನ್ನು ಕಂಡ ರೈತರು ಆರಿಸಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನೋಡು ನೋಡುತ್ತಿದಂತೆ ಬೆಂಕಿಯ ಕೆನ್ನಾಲಿಗೆ ಚಾಚುತ್ತಿತ್ತು. ನಂತರ ಅಗ್ನಿ ಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಒಟ್ಟು ಮೂವರು ರೈತರಿಗೆ ಸೇರಿದ ಮೂರವರೆ ಎಕರೆ ಜಮೀನಿನಲ್ಲಿ ಬಹುತೇಕ ಕಬ್ಬಿನ ಬೆಳೆ ಸುಟ್ಟು ಕರಕಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net