ವಿದ್ಯುತ್ ತಂತಿ ತಗುಲಿ ಆನೆ ಸಾವು

27 gkp 03
ಪೊನ್ನಂಪೇಟೆ ತಾಲೂಕಿನ ಕುಟ್ಟದಲ್ಲಿ ಶನಿವಾರ ವಿದ್ಯುತ್ ತಂತಿ ತಗುಲಿ ಆನೆ ಮೃತಪಟ್ಟಿರುವುದು.
Published on

ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕಿನ ಕುಟ್ಟದಲ್ಲಿ ಶನಿವಾರ ವಿದ್ಯುತ್ ತಂತಿ ತಗುಲಿ ಆನೆ ಮೃತಪಟ್ಟಿದೆ.
ಕರ್‌ಂಗಾಳಿ ದೇವಸ್ಥಾನ ಸಮೀಪದ ಪ್ರವರ್ಧನ್ ಪೂಜಾರಿ ಅವರ ಕಾಫಿ ತೋಟಕ್ಕೆ ಬೆಳಗ್ಗೆ 8 ಗಂಟೆ ಸುಮಾರಿಗೆ ಆಹಾರ ಅರಸಿ ಬಂದ ಅಂದಾಜು 43 ವಯಸ್ಸಿನ ಆನೆ, ತೋಟದಲ್ಲಿ ಹಾದು ಹೋಗಿದ್ದ 11 ಕೆ.ವಿ. ವಿದ್ಯುತ್ ತಂತಿ ತಗುಲಿ ಸಾವಿಗೀಡಾಗಿದೆ. ಡಾ. ಚಿಟ್ಯಪ್ಪ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಸ್ಥಳದಲ್ಲೇ ಶವ ಸುಡಲಾಯಿತು.
ಡಿಸಿಎಫ್ ಶರಣಬಸಪ್ಪ, ತಿತಿಮತಿ ಎಸಿಎಫ್ , ಎಚ್. ಸೀಮಾ, ಬಿ.ಎಂ.ಶಂಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net