ವಿದ್ಯುತ್​ ಕೇಬಲ್​ ಸ್ಫೋಟವಾಗಿ ನಾಲ್ವರಿಗೆ ಗಾಯ

Published on

ಪಾವಗಡ: ತಾಲೂಕಿನ ನಾಗಲಮಡಿಕೆ ಹೋಬಳಿಯ ಇಂಟೂರಾಯನಹಳ್ಳಿಯ ಹೊರವಲಯದಲ್ಲಿರುವ ಸೋಲಾರ್​ ಪಾರ್ಕ್​ನಲ್ಲಿ ಮಂಗಳವಾರ ಸಂಜೆ ವಿದ್ಯುತ್​ ಉಪಸ್ಥಾವರಕ್ಕೆ ವಿದ್ಯುತ್​ ಸರಬರಾಜು ಆಗುವ ಕೇಬಲ್​ ಸ್ಫೋಟಗೊಂಡು ಎಲೆಕ್ಟ್ರಿಷಿಯನ್​, ಟೆಕ್ನಿಷಿಯನ್​ಗಳಿಗೆ ಸುಟ್ಟ ಗಾಯಗಳಾಗಿದೆ. ಇಂಟೂರಾಯನಹಳ್ಳಿ ಗ್ರಾಮದ ಮಹೇಂದ್ರ, ಚೇತನ್​, ನಾಗೇಂದ್ರ, ಮಾಂತೇಶ್​ ಗಾಯಗೊಂಡಿದ್ದು, ಪ್ರಾಥಮಿಕ ಚಿಕಿತ್ಸೆಗಾಗಿ ಪಾವಗಡ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ತೀವ್ರವಾಗಿ ಗಾಯಗಳಾಗಿರುವ ನಾಗೇಂದ್ರ ಮತ್ತು ಮಾಂತೇಶ್​ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ತಿರುಮಣಿ ಪೊಲೀಸ್​ ಠಾಣೆ ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net