ವಿದ್ಯುತ್ ಕಾಯ್ದೆ ರೈತರಿಗೆ ಮರಣ ಶಾಸನ

14-kkr1(8-23
Published on

ಕಿಕ್ಕೇರಿ: ಸರ್ಕಾರ ಹೊಸದಾಗಿ ವಿದ್ಯುತ್ ಕಾಯ್ದೆ ರೂಪಿಸಿದ್ದು, ಇದು ರೈತರಿಗೆ ಮರಣ ಶಾಸನವಾಗಿದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಕಾರಿಗಾನಹಳ್ಳಿ ಪುಟ್ಟೇಗೌಡ ತಿಳಿಸಿದರು.

ಪಟ್ಟಣದ ಕೆ.ಎಸ್.ನರಸಿಂಹಸ್ವಾಮಿ ಸಮುದಾಯ ಭವನ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ರೈತರ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ವಿವಿಧ ಭಾಗ್ಯಗಳನ್ನು ನೀಡುವ ನೆಪದಲ್ಲಿ ಮತಬ್ಯಾಂಕ್ ಭದ್ರ ಮಾಡಿಕೊಳ್ಳಲು ಹೊರಟಿದೆ. ವಿದ್ಯುತ್ ಉತ್ಪಾದನೆ, ವಿತರಣೆ, ನಿರ್ವಹಣೆ ಎಲ್ಲವೂ ಖಾಸಗಿಯಾದಲ್ಲಿ ರೈತ ಬೀದಿಗೆ ಬೀಳಲಿದ್ದಾನೆ. ರೈತರ ಪಂಪ್‌ಸೆಟ್, ಐಪಿ ಸೆಟ್ ಆರ್.ಆರ್. ನಂಬರ್‌ಗಳಿಗೆ ಆಧಾರ್ ಲಿಂಕ್ ಮಾಡಲು ಸರ್ಕಾರ ಹೊರಟಿದೆ. ಇದನ್ನು ಖಂಡಿಸಿ ಆ.16ರಂದು ಬೆಳಗ್ಗೆ 11 ಗಂಟೆಗೆ ಕಂದಾಯ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಕೃಷ್ಣಾಪುರ ರಾಜಣ್ಣ, ನಾರಾಯಣಸ್ವಾಮಿ, ಸ್ವಾಮಿಗೌಡ, ಶಂಭುಗೌಡ, ರೇವಣ್ಣ, ಮರಿಯಯ್ಯ, ರವಿಕುಮಾರ್, ದೇವರಾಜು, ವೆಂಕಟೇಶ್, ರಾಮಯ್ಯ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net