

ಸೋಮವಾರಪೇಟೆ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಸೋಮವಾರ ರಾತ್ರಿ ಧಾರಾಕಾರ ಮಳೆ ಸುರಿದಿದ್ದು ಅಲ್ಲಲ್ಲಿ ಹಾನಿ ಸಂಭವಿಸಿದೆ. ದೊಡ್ಡತೋಳೂರು ಗ್ರಾಮದ ದಿನೇಶ್ ಎಂಬವರ ಹಸು ಶೀತದಿಂದ ಕೊಟ್ಟಿಗೆಯಲ್ಲಿ ಮೃತಪಟ್ಟಿದೆ. ಸ್ಥಳಕ್ಕೆ ಪಶು ವೈದ್ಯರು ತೆರಳಿ ಪರಿಶೀಲಿಸಿದರು.
ಕುಸೂಬೂರು ದೇವಾಲಯದ ಮುಂಭಾಗ ರಾಜ್ಯ ಹೆದ್ದಾರಿಯ ಸಮೀಪ ವಿದ್ಯುತ್ ಕಂಬದ ಮೇಲೆ ಮರಬಿದ್ದು ಹಾನಿಯಾಗಿದೆ. ಸ್ಥಳಕ್ಕೆ ಬಂದ ಸೆಸ್ಕ್ ಸಿಬ್ಬಂದಿ ತಂತಿಯನ್ನು ಸರಿಪಡಿಸಿದರು.
ಶುಂಠಿ ಗ್ರಾಮದ ಎಚ್.ಎಂ.ಜಿತೇಂದ್ರ ಎಂಬವರ ಲೈನ್‌ಮನೆಯ ಶೀಟ್‌ಗಳು ಗಾಳಿ ಹಾರಿಹೋಗಿದ್ದು ನಷ್ಟವಾಗಿದೆ. ಕಳೆದ 24 ಗಂಟೆಗಳಲ್ಲಿ ಶಾಂತಳ್ಳಿ ಹೋಬಳಿಗೆ 140 ಮಿ.ಮೀಟರ್, ಸೋಮವಾರಪೇಟೆ 74, ಶನಿವಾರಸಂತೆಗೆ 48, ಕೊಡ್ಲಿಪೇಟೆಗೆ 35.4 ಮಿ.ಮಿ ಮಳೆಯಾಗಿದೆ.