ಗುಬ್ಬಿ: ಕಸಬಾ ಹೋಬಳಿ ಜಿ.ಹೊಸಹಳ್ಳಿ ಬಳಿ ಗುಬ್ಬಿ- ಸಿ.ಎಸ್.ಪುರ ರಾಜ್ಯಹೆದ್ದಾರಿಯಲ್ಲಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಮಂಗಳವಾರ ತಡರಾತ್ರಿ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಸವಾರ ಮೃತಪಟ್ಟಿದ್ದಾನೆ. ಕಸಬಾ ಹೋಬಳಿ ಸುರುಗೇನಹಳ್ಳಿಯ ರಾಕೇಶ್ (45) ಮೃತ. ರಾಕೇಶ್ ತಡರಾತ್ರಿ ಗುಬ್ಬಿ ಕಡೆಯಿಂದ ಸ್ವಗ್ರಾಮ ಸುರುಗೇನಹಳ್ಳಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಕಾರು ರಸ್ತೆ ಬದಿಯ ಜಮೀನಿಗೆ ನುಗ್ಗಿ ಪಲ್ಟಿಯಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ, ಶಿರಾ ಡಿವೈಎಸ್ಪಿ ಶೇಖರ್ ಭೇಟಿ ನೀಡಿ ಪರಿಶೀಲಿಸಿದರು.