ವಿದ್ಯುತ್ ಕಂಬ ಅಳವಡಿಸಲು ಒತ್ತಾಯ

ydg07
Published on

ಕಕ್ಕೇರಾ : ಪಟ್ಟಣದ ಪುರಸಭೆ ವ್ಯಾಪ್ತಿಯ ೨ ಮತ್ತು ೬ನೇ ವಾರ್ಡ್ನಲ್ಲಿ ವಿದ್ಯುತ್ ಕಂಬ ಅಳವಡಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಈ ಕುರಿತು ಜೆಸ್ಕಾಂಗೆ ಮನವಿ ಸಲ್ಲಿಸಿದ ಪದಾಧಿಕಾರಿಗಳು, ಈ ವಾರ್ಡ್ಗಳಲ್ಲಿ ೫೦ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲ. ಹೀಗಾಗಿ ಕಂಬ ಅಳವಡಿಸುವ ಮೂಲಕ ವಿದ್ಯುತ್ ಸಂಪರ್ಕ ಒದಗಿಸಬೇಕು ಎಂದು ಒತ್ತಾಯಿಸಿದರು.

ಕಿಲ್ಲೇದಗಡ್ಡಿಯ ೨ರ ಚಿಕ್ಕೇದ ಹೊಲದ ಜಕ್ಕಪ್ಪನ ಗುಡಿಯಿಂದ ಮಲ್ಲಣ್ಣಗೌಡ ಹೆಗ್ಗನದೊಡ್ಡಿ ಮನೆವರೆಗೆ ಹಾಗೂ ಶೆಟ್ಟರ ಓಣಿಯ ೬ನೇ ವಾರ್ಡ್ನಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸದ ಕಾರಣ ಸುಮಾರು ೫೦ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲದೆ ಕತ್ತಲಲ್ಲಿ ವಾಸ ಮಾಡುತ್ತಿದ್ದಾರೆ. ಕೂಡಲೇ ಜೆಸ್ಕಾಂ ಅಧಿಕಾರಿಗಳು ಕಂಬ ಅಳವಡಿಸಿ ವಿದ್ಯುತ್ ಸಂಪರ್ಕ ಒದಗಿಸಬೇಕು ಎಂದು ಕರವೇ ಗೌರವಾಧ್ಯಕ್ಷ ಲಕ್ಷö್ಮಣ ಲಿಂಗದಳ್ಳಿ, ಅಧ್ಯಕ್ಷ ಸೋಮನಾಥ ದೊರೆ, ಪದಾಧಿಕಾರಿಗಳಾದ ಮಲ್ಲಣ್ಣಗೌಡ ಹೆಗ್ಗನದೊಡ್ಡಿ, ಆನಂದ ಬೋವಿ, ಹೊಳೆಪ್ಪ ಕಮತಗಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net