ವಿದ್ಯುತ್ ಅವಘಡ ರು.೪೦ ಲಕ್ಷಕ್ಕೂ ಅಧಿಕ ಹಾನಿ

0904 Surapur 01
ಜಾಲಿಬೆಂಚಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಡಾ.ಸುಶೀಲಾ ಬುಧವಾರ ಬೆಳಗ್ಗೆ ಭೇಟಿ ನೀಡಿ ವಿದ್ಯುತ್ ಹಾನಿ ಪರಿಶೀಲಿಸಿದರು. ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ತಹಸೀಲ್ದಾರ್ ಎಚ್.ಎ. ಸರಕಾವಸ್, ಜೆಸ್ಕಾ ಎಇಇ ರಫೀಕ್ ಇದ್ದರು.
Published on

ಸುರಪುರ: ಮಂಗಳವಾರ ಸಂಜೆ ಬೀಸಿದ ಬಿರುಗಾಳಿಗೆ ವಿದ್ಯುತ್ ವೈರ್‌ಗಳು ಒಂದಕ್ಕೊಂದು ತಗುಲಿ ಅವಘಡ ಸಂಭವಿಸಿದ ಜಾಲಿಬೆಂಚಿ ಗ್ರಾಮಕ್ಕೆ ಬುಧವಾರ ಬೆಳಗ್ಗೆ ಜಿಲ್ಲಾಧಿಕಾರಿ ಡಾ.ಸುಶೀಲಾ ಭೇಟಿ ಹಾನಿ ಪರಿಶೀಲನೆ ನಡೆಸಿದರು.

ವಿದ್ಯುತ್ ಸ್ಪರ್ಶದಿಂದ ಹಾನಿಯಾದ ಮನೆಗಳಿಗೆ ತೆರಳಿ ಮಹಿಳೆಯರಿಂದ ಮಾಹಿತಿ ಪಡೆದ ಅವರು, ೩೦ ವರ್ಷಕ್ಕೂ ಅಧಿಕ ಹಳೆಯದಾದ ವೈರ್‌ಗಳನ್ನು ಬದಲಾಯಿಸಿ ಕೂಡಲೇ ವಿದ್ಯುತ್ ಸಂಪರ್ಕ ಕೊಡುವಂತೆ ಜೆಸ್ಕಾಂ ಹಾಗೂ ಗಾಯಗೊಂಡ ಐವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ತಾಲೂಕು ಆರೋಗ್ಯಾಧಿಕಾರಿಗೆ ಸೂಚಿಸಿದರು.

ವಿದ್ಯುತ್ ಅವಘಡದಿಂದ ೭೦ಕ್ಕೂ ಹೆಚ್ಚು ಮನೆಗಳಲ್ಲಿದ್ದ ಟಿವಿ, ಫ್ರಿಡ್ಜ್, ಬ್ಯಾಟರಿ ಮತ್ತು ಫ್ಯಾನ್‌ಗಳು ಹಾನಿಗೀಡಾಗಿದ್ದು, ೪೦ ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಹಾನಿಯ ಸರ್ವೇ ಆರಂಭಿಸಿದ್ದು, ೪೦ ಮನೆಗಳ ಸರ್ವೇ ಮುಗಿದಿದೆ.

ಅಧಿಕಾರಿಗಳು ಹಾನಿ ಪರಿಶೀಲಿಸಿ ವರದಿ ನೀಡಲಿದ್ದು, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ತಲುಪಿಸಿ ಪರಿಹಾರ ಕಲ್ಪಿಸಿಕೊಡಲಾಗುವುದು. ಗ್ರಾಮಸ್ಥರೊಂದಿಗೆ ತಂದೆ ರಾಜಾ ವೆಂಕಟಪ್ಪ ನಾಯಕ ಇದ್ದಂತೆ ಸಹೋದರ ಶಾಸಕ ರಾಜಾ ವೇಣುಗೋಪಾಲ ನಾಯಕ ಸದಾ ಬೆಂಬಲಕ್ಕೆ ಇರುತ್ತಾರೆ. ಶೀಘ್ರವೇ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಜಾ ಸಂತೋಷ ನಾಯಕ ತಿಳಿಸಿದರು.

ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ತಹಸೀಲ್ದಾರ್ ಎಚ್.ಎ. ಸರಕಾವಸ್, ಜೆಸ್ಕಾ ಎಇಇ ರಫೀಕ್, ನಗರ ನೀರು ನೈರ್ಮಲ್ಯ ಅಧಿಕಾರಿ ಹನುಮಂತ ಪಾಟೀಲ, ಕಂದಾಯ ಅಧಿಕಾರಿ ಬಸವರಾಜ ಬಿರಾದಾರ, ವಿಐ ಪ್ರಕಾಶ ರಾಠೋಡ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net