ವಿದ್ಯುತ್‌ ಅವಘಡ, ಕಾರ್ಮಿಕ ಸಾವು

Published on

ಬಳ್ಳಾರಿ : ತಾಲೂಕಿನ ವೇಣಿವೀರಾಪುರ ಗ್ರಾಮದ ಅಗರ್‌ವಾಲ್‌ ಸ್ಪಾಂಜ್‌ ಐರನ್‌ ಅ್ಯಂಡ್‌ ಎನರ್ಜಿ ಕಂಪನಿಯಲ್ಲಿ ಇತ್ತೀಚೆಗೆ ದುರ್ಘಟನೆಯೊಂದು ಸಂಭವಿಸಿದ್ದು, ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ಮೀನಳ್ಳಿ ಗ್ರಾಮದ ರಾಜಣ್ಣ (42) ಮೃತ. ಸುರಂಗದಲ್ಲಿ ಕತ್ತಲೆ ಇದ್ದ ಕಾರಣ, ವಿದ್ಯುತ್‌ ಹ್ಯಾಂಡ್‌ ಲ್ಯಾಂಪ್‌ ಹಿಡಿದು ರಾಜಣ್ಣ ಕೆಲಸ ಮಾಡುತ್ತಿದ್ದರು. ಈ ವೇಳೆ ವಿದ್ಯುತ್‌ ಪ್ರವಹಿಸಿದ್ದು, ಗಾಯಗೊಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಬಳಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆದಲ್ಲಿ‌ ಮೃತಪಟ್ಟಿದ್ದಾರೆ. ಬಾಬಾ ಎಂಟರ್‌ಪ್ರೈಸಸ್‌ ಮತ್ತು ಅಗರ್‌ವಾಲ್‌ ಕಾರ್ಖಾನೆಯ ಒಟ್ಟು 8 ಮಂದಿಯ ವಿರುದ್ಧ ಕುಡಿತಿನಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net