

ಧಾರವಾಡ: ದಾಸ್ತಿಕೊಪ್ಪ (ಕಲಘಟಗಿ) ವಿದ್ಯುತ್ ವಿತರಣಾ ಕೇಂದ್ರದಲ್ಲಿ ಆ. 28ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು 2ನೇ ತ್ರೈ ಮಾಸಿಕ ಕಾಮಗಾರಿ ಕೈಗೊಳ್ಳುವುದರಿಂದ ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ದಾಸ್ತಿಕೊಪ್ಪ, ಕಲಘಟಗಿ, ಹಿರೇಹೊನ್ನಳ್ಳಿ, ಧೂಳಿಕೊಪ್ಪ, ಬೇಗೂರ, ಹುಲ್ಲಂಬಿ, ಬಿಸರಳ್ಳಿ, ಗಳಗಿನಗಟ್ಟಿ, ರಾಮನಾಳ, ಹರೋಗೇರಿ, ಮಡಕಿಹೊನ್ನಳ್ಳಿ, ಸಂಗಿದೇವರಕೊಪ್ಪ, ಬಗಡಗೇರಿ, ಹಿಂಡಸಗೇರಿ, ಹುಣಸಿಕಟ್ಟಿ,ಮುಕ್ಕಲ, ಬಿದರಗಡ್ಡಿ, ಬೆಲವಂತರ, ಶಿವನಾಪುರ, ಹನಮಾಪುರ, ತಾವರಗೇರಿ, ಅರಳಿಹೊಂಡ, ನೆಲ್ಲಿಹರವಿ, ತಬಕದಹೊನ್ನಳ್ಳಿ, ಬಿರವಳ್ಳಿ, ಬೆಂಡಲಗಟ್ಟಿ ಸೇರಿ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.