ವಿದ್ಯಾವಿಕಾಸ ಶಾಲೆಗೆ ಪ್ರಶಸ್ತಿಯ ಗರಿ

Vidhyavikasa
Published on

ಚಿತ್ರದುರ್ಗ: ದೇವರಾಜ್ ಅರಸು ಶಿಕ್ಷಣ ಸಂಸ್ಥೆಯಲ್ಲಿ ನಡೆದ ಅಂತರ್ ಶಾಲಾ ಮಟ್ಟದ ಕ್ರಿಕೆಟ್‌ನಲ್ಲಿ ವಿದ್ಯಾವಿಕಾಸ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಚಾಂಪಿಯನ್ ಆಗಿ ಹೊರಹೊಮ್ಮಿದರು. ಚದುರಂಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದರು.

ಕ್ರಿಕೆಟ್ ಬಾಲಕರ ವಿಭಾಗದಲ್ಲಿ ಡಿ.ಮಿತುನ್ ದೇವ್ ಅಲ್‌ರೌಂಡರ್ ಪ್ರಶಸ್ತಿ ಮುಡಿಗೇರಿಸಿಕೊಂಡನು. ಡಿ.ಆರ್.ಭರತ್ ಅತ್ಯುತ್ತಮ ಬೌಲರ್ ಪ್ರಶಸ್ತಿ, ಚದುರಂಗ ಸ್ಪರ್ಧೆಯ ಬಾಲಕಿಯರ ವಿಭಾಗದಲ್ಲಿ ಎಂ.ಶ್ರೇಯಾ ಪ್ರಥಮ ಸ್ಥಾನ ಪಡೆದಿದ್ದಾರೆ.

ಶಾಲೆಗೆ ಕೀರ್ತಿ ತಂದ ಕ್ರೀಡಾಪಟುಗಳಿಗೆ ಸಂಸ್ಥೆಯ ಕಾರ್ಯದರ್ಶಿ ಬಿ.ವಿಜಯ್‌ಕುಮಾರ್, ನಿರ್ದೇಶಕರಾದ ಎಸ್.ಎಂ.ಪೃಥ್ವೀಶ್, ಪಿ.ಸಿ.ಸುನಿತಾ, ಅಕಾಡೆಮಿಕ್ ಆಡಳಿತಾಧಿಕಾರಿ ಡಾ.ಕೆ.ಎನ್.ಸ್ವಾಮಿ, ಮುಖ್ಯಶಿಕ್ಷಕ ಸಿ.ಡಿ.ಸಂಪತ್‌ಕುಮಾರ್, ಐಸಿಎಸ್‌ಇ ಪ್ರಾಚಾರ್ಯ ಪಿ.ಬಸವರಾಜಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net